ಬೆಂಗಳೂರು:ಬೆಂಗಳೂರಿನಲ್ಲಿ ಅತ್ಯುತ್ತಮ ಸಾರಿಗೆ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ ಸಾರಿಗೆ ಬಳಕೆಯಲ್ಲಿ ಕುಸಿತ ಕಂಡು ಬಂದಿದೆ. ಪ್ರಯಾಣದ ದರ ಏರಿಕೆ ಕಾರಣದಿಂದ ಜನರು ಪರಿಸರಕ್ಕೆ ಪೂರಕವಾದ ಮೆಟ್ರೋ ಬದಲಿಗೆ ಖಾಸಗಿ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. BMTC ಬಸ್ ಬಳಕೆಯು ಕೊಂಚ ಏರಿಕೆ ಆಗಿದೆ. ಈ ಕಾರಣದಿಂದ ರಾಜಧಾನಿಯಲ್ಲಿ ಫೆಬ್ರವರಿ 10 ರ ನಂತರ ನಿರಂತರವಾಗಿ ವಾಯು ಗುಣಮಟ್ಟದಲ್ಲಿ ತೀವ್ರತರವಾದ ಬದಲಾವಣೆ ಆಗಿದೆ. ವಾಯು ಮಾಲಿನ್ಯವಾಗುತ್ತಿದೆ ಎಂದು ವರದಿ ಆಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಕಳೆದ ತಿಂಗಳು ಫೆಬ್ರವರಿ 9 ರಂದು ಮೆಟ್ರೋ ಪ್ರಯಾಣ ದರವನ್ನು ಶೇಕಡಾ ೫೦ರಷ್ಟು ಹಾಗೂ , 30 ಕಿ.ಮೀ.ಗೂ ದೂರದ ಪ್ರಯಾಣಕ್ಕೆ ಗರಿಷ್ಠ ದರ 6೦ ರಿಂದ 9೦ ರೂಪಾಯಿಗೆ ಹೆಚ್ಚಿಸಿತು. ಇನ್ನೂ ರಿಯಾಯಿತಿ ದರ ಸಿಗುತ್ತದೆ ಎಂದು ಮೆಟ್ರೋ ಸ್ಮರ್ಟ್ ಕರ್ಡ್ ಬಳಕೆದಾರರಿಗೆ ಶಾಕ್ ನೀಡಿತು. ಗಳಲ್ಲಿ ಅಗತ್ಯವಿರುವ ಕನಿಷ್ಠ ಬ್ಯಾಲೆನ್ಸ್ ಅನ್ನು 5೦ ರೂ.ನಿಂದ 9೦ ರೂಪಾಯಿಗೆ ಪರಿಷ್ಕರಿಸಿ ಆದೇಶಿಸಿತು.
ಈ ಮೆಟ್ರೋ ಟಿಕೆಟ್ ದರ ಏರಿಕೆಗೆ ಜನರು ವ್ಯಾಪಕವಾಗಿ ಆಕ್ರೋಶ ಹೊರಹಾಕಿದರು. ದೈನಂದಿನ ಪ್ರಯಾಣಿಕರಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚ ಜನರು ಮೆಟ್ರೋ ಬಹಿಷ್ಕರಿಸಲು ನರ್ಧರಿಸಿದೆ. ಪರಿಣಾಮ ಖಾಸಗಿ ವಾಹನಗಳು, ಟ್ಯಾಕ್ಸಿ, ಆಟೋಗಳ ಬಳಕೆ ಹೆಚ್ಚಾಯಿತು. ಇದು ಪರಿಸರದಲ್ಲಿ ವಾಯು ಗುಣಮಟ್ಟ ಮಲೀನಕ್ಕೆ ಕಾರಣವಾಗಿದೆ ಎಂದು ‘ದಿ ಫೆಡರಲ್’ ವರದಿ ಮಾಡಿದೆ.
ನಮ್ಮ ಮೆಟ್ರೋ ದರ ಅವೈಜ್ಞಾನಿಕವಾಗಿ ಅತೀ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಆಕ್ರೋಶ ಕೇಳಿ ಬಂತು. ಬಳಿಕ ಸ್ಟೇಜ್ ಬೈ ಸ್ಟೇಜ್ ರ್ಜ ಮಾಡಿ, ಕೊಂಚ ಅಂದರೆ ಶೇಕಡಾ 1೦ ರಷ್ಟು ಕಡಿಮೆ ಮಾಡಿತು. ಇದು ಕೆಲವು ಮರ್ಗಗಳಲಿಗೆ ಮಾತ್ರ ಅನ್ವಯಿಸಿದ್ದು, ಬಹುತೇಕ ಮರ್ಗಗಳಲ್ಲಿ ದರ ಏರಿಕೆ ಯಥಾಸ್ಥಿತಿಯಲ್ಲಿದೆ.
ಮೆಟ್ರೋ ಪ್ರಯಾಣಿಕ್ಕಿಂತ ಖಾಸಗಿ ವಾಹನಗಳ ಪ್ರಯಾಣ ಅಗ್ಗ ಎಂದು ಲೆಕ್ಕಾಚಾರ ಮಾಡಿ ಮೆಟ್ರೋ ಕಡೆಗಣಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಎಲ್ಲ ವಿಧದ ಖಾಸಗಿ ವಾಹನಗಳ ಬಳಕೆ ಹೆಚ್ಚಾಗಿದೆ. ಇದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿದೆ.
ನಗರದಲ್ಲಿ ಹದಗೆಡುತ್ತಿದೆ ವಾಯು ಗುಣಮಟ್ಟ, ವಿವರ ಮೆಟ್ರೋ ಬಿಟ್ಟು ಕಾರು, ಬಸ್, ಬೈಕ್, ಟ್ಯಾಕ್ಸಿ ಆಟೋ ಏರುತ್ತಿದ್ದಾರೆ. ಇದರಿಂದ ನಮ್ಮ ಮೆಟ್ರೋ ದೈನಂದಿನ ಪ್ರಯಾಣಿಕ ಸಂಖ್ಯೆ ಶೇ. 10.5 ರಷ್ಟು ಕುಸಿತ ಕಂಡಿದೆ. ಇತ್ತ ನಗರದಲ್ಲಿ ವಾಯು ಮಾಲಿನ್ಯಗೊಂಡಿದ್ದನ್ನು ರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೃಢಪಡಿಸಿದೆ. ನಗರ ಸಾರಿಗೆ ವಲಯದಿಂದ ಶೇ. 40 ರಿಂದ 51 ರಷ್ಟು ಮಾಲಿನ್ಯ, ಧೂಳು ಶೇ. 17ರಿಂದ 51 ರಷ್ಟು ಧೂಳು ಉಂಟಾಗುತ್ತದೆ. ಮೆಟ್ರೋ ದರ ಏರಿಕೆ ಬಳಿಕ (ಫೆ10 ರ ನಂತರ) ಇದರ ಪ್ರಮಾಣ ಗಮನರ್ಹವಾಗಿ ಏರಿಕೆ ಆಗಿದೆ. ಒಂದು ಪ್ರದೇಶದ ವಿವರ ನೋಡುವುದಾದರೆ ಜಯನಗರ 5 ನೇ ಬ್ಲಾಕ್ ವ್ಯಾಪ್ತಿಯಲ್ಲಿ ಗರಿಷ್ಠ 43 ರಿಂದ 54 ಮೈಕ್ರೋ ಗ್ರಾಂ ಕ್ಯೂಬಿಕ್ ಮಾಲಿನ್ಯ ಅಂಶ ದಾಖಲಾಗುತ್ತಿತ್ತು. ಅದು ಫೆಬ್ರವರಿ 10 ರ ನಂತರ ಪ್ರತಿ ಘನ ಮೀಟರ್ಗೆ 112-114 ಮೈಕ್ರೋಗ್ರಾಂಗೆ ಏರಿಕೆ ಆಗಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಗುರುವಾರದ ಮಟ್ಟ, ಕಳಪೆ ಎಲ್ಲಿ ಬೆಂಗಳೂರಿನಲ್ಲಿ ಇಂದು ಕಸ್ತೂರಿ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಕಳಪೆ ಆಗಿದೆ. ಇಲ್ಲಿ 203 AQI ಮಟ್ಟ ದಾಖಲಾಗಿದೆ. ಪೀಣ್ಯದ ಶಿವಪುರದಲ್ಲಿ 96 AQI ಮಟ್ಟ ಇದ್ದು, ಇದು ಸಮಾಧಾನಕರ ಎನ್ನಲಾಗಿದೆ. ಜಿಗಣಿಯಲ್ಲಿ ಗಾಳಿ ಮಟ್ಟ ಮಧ್ಯಮ ಮಟ್ಟದಲ್ಲಿದೆ. ಇಲ್ಲಿ 145 AQI ದಾಖಲಾಗಿದೆ. ಉಳಿದಂತೆ ನಗರ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ 100 AQI, ಬಾಪೂಜಿ ನಗರ 109 AQI, ಹೆಬ್ಬಾಳ ವ್ಯಾಪ್ತಿಯಲ್ಲಿ 108 AQI, ಜಯನಗರ 5ನೇ ಬ್ಲಾಕ್ 102 AQI, ಬಿಟಿಎಂ ಬಡಾವಣೆ 102 AQI, ಸಿಲ್ಕ್ ಬರ್ಡ್ ವ್ಯಾಪ್ತಿಯಲ್ಲಿ 122 AQI ದಾಖಲಾಗಿದೆ.