ಸುಡಾನ್: ಮಿಲಿಟರಿ ವಿಮಾನವೊಂದು ಪತನಗೊಂಡು 46 ಜನರು ಸಾವನ್ನಪ್ಪಿರುವ ಘಟನೆ ಸುಡಾನ್ ರಾಜಧಾನಿ ಖಾರ್ಟೌಮ್ ಹೊರವಲಯದಲ್ಲಿ ನಡೆದಿದೆ. ವಿಮಾನ ನಿಲ್ದಾಣದಿಂದ ಹಾರುವಾಗ ವಿಮಾನ ಪತನಗೊಂಡು, ಸೇನಾ ಸಿಬ್ಬಂದಿ ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಅನೇಕರು ಗಾಯಗೊಂಡಿದದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳದವರು ಅಪಘಾತ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಟೊನೊವ್ ವಿಮಾನ ಅಪಘಾತಕ್ಕೆ ತಾಂತ್ರಿಕ ದೋಷ ಕಾರಣ ಎಂದು ಮಿಲಿಟರಿ ಮೂಲಗಳು ತಿಳಿಸಿವೆ. ವಿಮಾನ ಪತನಗೊಂಡ ಪ್ರದೇಶದಲ್ಲಿ ಇದ್ದ ಅನೇಕ ಮನೆಗಳಿಗೆ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾ
