ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಜನರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಗ್ಯಾರಂಟಿ ಯೋಜನೆಯ ನಷ್ಟವನ್ನು ಈ ಮೂಲಕ ಜನಸಾಮಾನ್ಯರಿಂದ ಸರ್ಕಾರ ಪಡೆದುಕೊಳ್ಳುತ್ತಿದೆ. ಇದೀಗ ಸರ್ಕಾರ ಜನರಿಗೆ ಮತ್ತೊಮ್ಮೆ ಬಿಗ್ ಶಾಕ್ ನೀಡಿದೆ.
ಹಾಲಿನ ದರವನ್ನು ಪ್ರತೀ ಲೀಟರ್ ಗೆ ಐದು ರೂ., ಹಾಗೂ ನೀರಿನ ದರವನ್ನು ಪ್ರತೀ ಲೀಟರ್ ಗೆ ಒಂದು ಪೈಸೆ ಹೆಚ್ಚಳ ಮಾಡುವ ಪ್ರಸ್ತಾವನೆ ಇದೆ. ಅನುಮತಿ ದೊರೆತರೆ ಮುಂಬರುವ ದಿನಗಳಲ್ಲಿ ಗ್ರಾಹಕರ ಮೇಲೆ ಇದರ ಬರೆಯೂ ಬೀಳಲಿದೆ ಎಂದು ಹೇಳಲಾಗುತ್ತಿದೆ.
ಇಂದು ಸರ್ಕಾರದಿಂದ ಸಂಪುಟ ಸಭೆ ನಡೆಯಲಿದ್ದು ನಿರ್ಧಾರ ಮಾಡಲಿದೆ. ಸರ್ಕಾರ ಗಾಯದ ಮೇಲೆ ಮತ್ತೆ ಬರೆ ಎಳೆಯದಿದ್ದರೆ ಸಾಕು ಎಂದು ಜನರು ಮನವಿ ಮಾಡಿದ್ದಾರೆ
 
				 
         
         
         
															 
                     
                     
                     
                    


































 
    
    
        