ನವದೆಹಲಿ : ಕೇಂದ್ರ ರೈಲು, ಸಂಚಾರ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ತಮ್ಮ ದೈನಂದಿನ ದಾಖಲೆ ಸಂಭಂಧಿತ ಕಾರ್ಯಗಳಿಗಾಗಿ ಭಾರತೀಯ ತಂತ್ರಜ್ಞಾನ ಕಂಪನಿಯಾದ ಜೊಹೊ ಬಳಕೆಯನ್ನು ಆರಂಭಿಸುತ್ತಿರುವುದಾಗಿ ಘೋಷಿಸಿದರು. ಜೊತೆಗೆ ಸ್ವದೇಶಿ ಉತ್ಪನ್ನಗಳು ಮತ್ತು ಸೇವೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸ್ವದೇಶಿ ಕರೆಗೆ ಸೇರಬೇಕೆಂದು ಜನರಿಗೆ ಮನವಿ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ಅವರು, “ನಾನು ದಾಖಲೆಗಳು, ಸ್ಪ್ರೆಡ್‌ಶೀಟ್‌ಗಳು ಮತ್ತು ಪ್ರೆಸೆಂಟೇಶನ್‌ಗಾಗಿ ನಮ್ಮದೇ ಆದ ಸ್ವದೇಶಿ ವೇದಿಕೆಯಾದ ಜೊಹೊಗೆ ತೆರಳುತ್ತಿದ್ದೇನೆ” ಎಂದು ಬರೆದು, ದೇಶಿಯ ಉತ್ಪನ್ನಗಳ ಬಳಕೆ ಹೆಚ್ಚಿಸುವ ಮೂಲಕ ಆತ್ಮನಿರ್ಭರ ಭಾರತದ ಕನಸನ್ನು ಸಾಕಾರಗೊಳಿಸಲು ಎಲ್ಲರೂ ಮುಂದಾಗಬೇಕು ಎಂಬ ಸಂದೇಶವನ್ನು ನೀಡಿದ್ದಾರೆ.
ಅವರು ತಮ್ಮ ಪೋಸ್ಟ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ “ಸ್ವದೇಶಿ ಸೇವೆಗಳ ಬಳಕೆ” ಎಂಬ ಆಶಯವನ್ನು ಪುನರುಚ್ಛರಿಸಿ, ಸಾರ್ವಜನಿಕರೂ ಸಹ ದೇಶೀಯ ತಂತ್ರಜ್ಞಾನ ಮತ್ತು ಸೇವೆಗಳ ಬಳಕೆಯನ್ನು ಜೀವನದ ಎಲ್ಲ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ತಂತ್ರಜ್ಞಾನದಲ್ಲಿ ಆಧಾರಿತ ಹಿತಚಿಂತನೆ, ಡಿಜಿಟಲ್ ಭಾರತ ಅಭಿಯಾನಕ್ಕೆ ಪ್ರೋತ್ಸಾಹ ಹಾಗೂ ಸ್ಥಳೀಯ ಕಂಪನಿಗಳ ಬೆಂಬಲ ಎಂಬ ಮೂರು ಪ್ರಮುಖ ಅಂಶಗಳನ್ನು ಈ ಘೋಷಣೆ ಒತ್ತಿಹೇಳುತ್ತದೆ.
ಜೊಹೊ ಒಂದು ತಮಿಳುನಾಡು ಆಧಾರಿತ ಸಾಫ್ಟ್‌ವೇರ್ ಕಂಪನಿಯಾಗಿ, ಇತ್ತೀಚೆಗೆ ಗ್ಲೋಬಲ್ ಮಟ್ಟದಲ್ಲಿ ತಮ್ಮ ಸೇವೆಗಳ ಗುಣಮಟ್ಟದಿಂದ ಗಮನ ಸೆಳೆದಿದೆ. ಕೇಂದ್ರ ಸಚಿವರೊಬ್ಬರು ಈ ಪ್ಲಾಟ್‌ಫಾರ್ಮ್‌ನ್ನು ಅಧಿಕೃತವಾಗಿ ಬಳಸುವುದಾಗಿ ಘೋಷಿಸುವುದು, ದೇಶೀಯ ತಂತ್ರಜ್ಞಾನಗಳ ಜಾಗೃತಿಗಾಗಿ ಹೊಸ ಉತ್ಸಾಹವನ್ನು ನೀಡುವ ಸಾಧ್ಯತೆ ಇದೆ.