ಸತತ 8ನೇ ಬಜೆಟ್ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರೆಡಿಯಾಗಿದ್ದಾರೆ. ಈ ಬಾರಿಯೂ ನಿರ್ಮಲಾ ಅವರ ಸೀರೆ ಗಮನ ಸೆಳೆದಿದೆ.
ಮಧುಬನಿ ಕಲೆಯುಳ್ಳ ಕೆನೆ ಬಣ್ಣದ ಸೀರೆ ಧರಿಸಿ ಸಂಸತ್ ಭವನಕ್ಕೆ ಅವರು ಆಗಮಿಸಿದ್ದಾರೆ. ಈ ಮೂಲಕ ಮಧುಬನಿ ಕಲೆ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
ನಿರ್ಮಲಾ ಇತ್ತೀಚೆಗೆ ದುಲಾರಿ ದೇವಿ ಅವರನ್ನು ಭೇಟಿಯಾಗಿದ್ದರು. ಆಗ ಅವರು ಈ ಸೀರೆ ಗಿಫ್ಟ್ ನೀಡಿದ್ದರು. ಬಜೆಟ್ ದಿನ ಅದನ್ನು ಧರಿಸುವಂತೆ ಮನವಿ ಮಾಡಿದ್ದರು.