ಚಿತ್ರದುರ್ಗ: ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ್ದೂ ಪಾಲಿದೆ ಕೇಂದ್ರ ಸರ್ಕಾರ ಕೊಟ್ಟರೂ ಮನೆಯಿಂದ ಏನೂ ಕೊಡಲ್ಲ ನಾವು ಕಟ್ಟಿದ ತೆರಿಗೆ ಹಣವನ್ನೇ ನಮಗೆ ಕೊಡುತ್ತಾರೆ ನಾವು ಕಟ್ಟಿದ ತೆರಿಗೆ ಪಾಲು ಸಹ ಸರಿಯಾಗಿ ಕೊಡುತ್ತಿಲ್ಲ ಎಂದು ಸಚಿವ ಎಂ ಬಿ ಪಾಟೀಲ್ ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಕೇಂದ್ರದ ಪರವಾಗಿ ಮಾತಾಡುವವರು ನಮ್ಮ ರಾಜ್ಯದ ಪಾಲು 65ಸಾವಿರ ಕೋಟಿ ಕೊಡಿಸಲಿ ಎಂದರು. ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಆರೋಪ ವಿಚಾರ ದೂರು ನೀಡಿ ಅಥವಾ ದೇಶದ ಕ್ಷಮೆ ಕೇಳಿ ಎಂದು ಚುನಾವಣೆ ಆಯೋಗ ಪ್ರಕಟಣೆ ವಿಚಾರರಾಹುಲ್ ಗಾಂಧಿ ಸಂಸದರು, ಲೋಕಸಭೆ ವಿಪಕ್ಷ ನಾಯಕರು ಪ್ರಮಾಣ ವಚನ ಸ್ವೀಕರಿಸಿಯೇ ಸಂಸದರಾಗಿದ್ದಾರೆ.
ರಾಹುಲ್ ಗಾಂಧಿ ಅಫಿಡವೆಟ್ ನೀಡುವ ಅಗತ್ಯ ಬರಲ್ಲ ಸಂವಿಧಾನ ತಿಳಿದುಕೊಳ್ಳಲಿ, ಸಾಂವಿಧಾನಿಕತ್ಮಕ ಹುದ್ದೆ ಬಗ್ಗೆ ಅರಿಯಲಿ ರಾಹುಲ್ ಗಾಂಧಿ ಡಿಜಿಟಲ್ ದಾಖಲೆ ಕೇಳಿದ್ದಾರೆ ಚುನಾವಣೆ ಆಯೋಗ ಏಕೆ ಡಿಜಿಟಲ್ ದಾಖಲೆ ಕೊಡುತ್ತಿಲ್ಲ ಎಂದು ಕಿಡಿ ಕಾರಿದ ಸಚಿವರು ಪ್ರಶ್ನೆ ಮಾಡಿದರೆ ಅಪ್ರಬುದ್ಧ ನಾಯಕರಾಗ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.