ದಾವಣಗೆರೆ : ದಾವಣಗೆರೆ ಕೆ.ಎಸ್.ಆರ್.ಟಿ.ಸಿ. ಯಿಂದ ಹರಿಹರ, ಹೊಸಪೇಟೆ, ಬಳ್ಳಾರಿ, ಕರ್ನೂಲು ಮಾರ್ಗವಾಗಿ ಶ್ರೀಶೈಲಂ ಗೆ ನಾನ್ ಎಸಿ ಪಲ್ಲಕ್ಕಿ ನೂತನ ಬಸ್ ಸೇವೆಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಅವರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ನೂತನ ನಾನ್ ಎಸಿ ಪಲ್ಲಕ್ಕಿ ಬಸ್ ಸೇವೆಗೆ ಚಾಲನೆ ನೀಡಿದರು.
ಮಾರ್ಗದ ವಿವರ:
ದಾವಣಗೆರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಸಂಜೆ 5.15 ಕ್ಕೆ ಹೊರಟು ಹರಿಹರ, ಹರಪನಹಳ್ಳಿ, ಹೊಸಪೇಟೆ, ಬಳ್ಳಾರಿ ಮಾರ್ಗದ ಮೂಲಕ ಬೆಳಗ್ಗೆ 7ಗಂಟೆಗೆ ಶ್ರೀಶೈಲಂ ತಲುಪಲಿದೆ. ಈ ಮಾರ್ಗವೂ 567 ಕಿ.ಮೀ ಪ್ರಯಾಣ ದೂರವಿದ್ದು, ರೂ.1216 ಪ್ರಯಾಣ ದರ ನಿಗದಿಪಡಿಸಲಾಗಿದೆ. ಪುನಃ ಶ್ರೀಶೈಲಂನಿಂದ ಸಂಜೆ 7.15 ಕ್ಕೆ ಹೊರಟು ಅದೇ ಮಾರ್ಗವಾಗಿ ಬೆಳಗ್ಗೆ 7ಕ್ಕೆ ದಾವಣಗೆರೆ ಬಸ್ ನಿಲ್ದಾಣ ತಲುಪಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಸಿಇಓ ಗಿತ್ತೆ ಮಾಧವ ವಿಠಲ ರಾವ್, ವಿಭಾಗೀಯ ನಿಯಂತ್ರಧಿಕಾರಿ ಬಿ.ಎಸ್.ಶಿವಕುಮಾರಯ್ಯ, ಮಾರ್ಗ ನಿಯಂತ್ರಣಾಧಿಕಾರಿ ಫಕ್ರುದ್ದೀನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.






























