ಸಂಘದಲ್ಲಿ ಸಾಮಾಜಿಕ ಕಳಕಳಿ ಬಹಳ ಮುಖ್ಯ: ಶಾಸಕ ಕೆ.ಸಿ.ವೀರೇಂದ್ರಪಪ್ಪಿ

 

 

ಚಿತ್ರದುರ್ಗ : ಸಾಮಾಜಿಕ ಕಳಕಳಿಯುಳ್ಳವರು ಸಂಘದಲ್ಲಿದ್ದಾಗ ಮಾತ್ರ ಬಲಿಷ್ಟವಾಗಿ ಮುನ್ನಡೆಸಿಕೊಂಡು ಹೋಗಬಹುದು ಎಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಹೇಳಿದರು. ಮೆದೇಹಳ್ಳಿ ರಸ್ತೆ, ಮಾರುತಿ ನಗರದಲ್ಲಿ ಶುಕ್ರವಾರ ವಿನಾಯಕ ಕ್ಷೇಮಾಭಿವೃದ್ದಿ ಸಂಘವನ್ನು ಉದ್ಗಾಟಿಸಿ ಮಾತನಾಡಿದರು.

Advertisement

ಯಾವುದೇ ಒಂದು ಸಂಘವನ್ನು ಕಟ್ಟುವುದು ಕಷ್ಟ. ಸಂಘ ಕಟ್ಟಿದ ನಂತರ ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಇನ್ನು ಕಷ್ಟದ ಕೆಲಸ. ಸಂಘ ಬಲಿಷ್ಟವಾಗಿರಬೇಕಾದರೆ ಒಡಕಾಗದಂತೆ ಎಚ್ಚರ ವಹಿಸುವುದು ಮುಖ್ಯ. ಮಾರುತಿ ನಗರದ ಅಭಿವೃದ್ದಿ ಸೇರಿದಂತೆ ಇಡಿ ಚಿತ್ರದುರ್ಗ ನಗರವನ್ನು ಅಭಿವೃದ್ದಿಪಡಿಸಿ ಸ್ವಚ್ಚವಾಗಿಟ್ಟುಕೊಳ್ಳಬೇಕಾಗಿದೆ. ಸಾಮಾಜಿಕ ಕಾರ್ಯಗಳಿಗೆ ಸ್ವಯಂ ಸೇವಕರ ಅಗತ್ಯವಿದೆ. ನಗರದ 35 ವಾರ್ಡ್ಗಳಲ್ಲಿಯೂ ಹೈಮಾಸ್ ದೀಪ ಅಳವಡಿಕೆಗೆ ಸರ್ಕಾರದಿಂದ ಹಣ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ಕೆಲಸ ಕೈಗೆತ್ತಿಕೊಳ್ಳಲಾವುದು ಎಂದರು.

ನಗರಸಭೆ ಮಾಜಿ ಸದಸ್ಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ರಮೇಶ್ ಮಾತನಾಡಿ ಮಾರುತಿ ನಗರದಲ್ಲಿ ಸಂಘ ಉದ್ಘಾಟನೆಯಾಗಿದೆ ಎಂದರೆ ವಾರ್ಡ್ಗೆ ಶಕ್ತಿ ಬಂದಂತೆ. ಇಲ್ಲಿ ಏನಾದರೂ ಸಮಸ್ಯೆಗಳು ಎದುರಾದಾಗ ಸಂಘದ ಮೂಲಕ ಬಗೆಹರಿಸಿಕೊಳ್ಳಲು ಸಹಾಯವಾಗಲಿದೆ. ಪ್ರತಿಯೊಬ್ಬರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸುವ ಶಾಸಕರು ನಮಗೆ ಸಿಕ್ಕಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿನಾಯಕ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಎನ್.ತಿರುಮಲಯ್ಯ, ಗೌರವಾಧ್ಯಕ್ಷ ದಿನೇಶ್ ಡಿ. ಉಪಾಧ್ಯಕ್ಷರುಗಳಾದ ನೂರುಲ್ಲಾ ಜಿ.ಬಿ. ವೆಂಕಟೇಶ್ರೆಡ್ಡಿ ಎಂ.ಆರ್.

ಕಾರ್ಯದರ್ಶಿ ವೆಂಕಟೇಶ್ ಎನ್. ಜಂಟಿ ಕಾರ್ಯದರ್ಶಿ ವಿನಾಯಕ ಕೆ.ಎಂ. ಸಂಘಟನಾ ಕಾರ್ಯದರ್ಶಿ ರಾಮಾಂಜನೇಯ, ಖಜಾಂಚಿ ನಾಗರಾಜ್ ಕೆ.ಎಸ್. ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಮಿತ, ಉಪಾಧ್ಯಕ್ಷೆ ಶ್ರೀಮತಿ ಶ್ರೀದೇವಿ ಚಕ್ರವರ್ತಿ, ಮಾಜಿ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮವೆಂಕಟೇಶ್, ನಗರಸಭೆ ಸದಸ್ಯರುಗಳಾದ ಶ್ರೀಮತಿ ಎಂ.ಪಿ.ಅನಿತ

ಟಿ.ರಮೇಶ್, ವೆಂಕಟೇಶ್, ಕೆ.ಬಿ.ಸುರೇಶ್, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ್, ನಗರಸಭೆ ಪೌರಾಯುಕ್ತೆ ಶ್ರೀಮತಿ ರೇಣುಕ ಸೇರಿದಂತೆ ವಿನಾಯಕ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

 

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement