ಚಿತ್ರದುರ್ಗ: ಹೊಳಲ್ಕೆರೆ ಶಾಸಕರಾದ ಎಂ.ಚಂದ್ರಪ್ಪರವರು ಈ ಕ್ಷೇತ್ರದಲ್ಲಿ ವಿವಿಧ ರೀತಿಯ ಅಭಿವೃದ್ದಿ ಕಾರ್ಯವನ್ನು ಮಾಡಿದ್ದಾರೆ ಅವರು ಯಾವುದೇ ಭ್ರಷ್ಠಾಚಾರವನ್ನು ಮಾಡಿಲ್ಲ ಸದಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಚಿಂತನೆಯನ್ನು ನಡೆಸುತ್ತಾರೆ ಎಂದು ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್ ಹೇಳಿದರು.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2008 ವಿಧಾನಸಭಾ ಚುನಾವಣೆಯಿಂದ ಹಿಡಿದು 2024ರ ಚುನಾವಣೆಯವರೆಗೂ ಚಂದ್ರಪ್ಪರವರ ಮೇಲೆ ಆರೋಪ ಮಾಡಿದ ಜಯಸಿಂಹ ಪಕ್ಷದ ಪರವಾಗಲಿ, ಚಂದ್ರಪ್ಪರವರ ಪರವಾಗಲಿ ಚುನಾವಣೆಯಲ್ಲಿ ಕೆಲಸವನ್ನು ಮಾಡಿಲ್ಲ ಇದರ ಬದಲಿ ಚಂದ್ರಪ್ಪರವರ ವಿರುದ್ದ ಬೇರೆಯವರನ್ನು ನಿಲ್ಲಿಸಿ ಅವರು ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದಾರೆ ಎಂದರು.
ಇವರು ಮೂಲತ ಬಿಜೆಪಿಯವರು ಎನ್ನುತ್ತಿದ್ದಾರೆ ಆದರೆ ಒಂದು ದಿನವೂ ಸಹಾ ಪಕ್ಷದ ಕಚೇರಿಗೆ ಬಂದಿಲ್ಲ ಸಭೆಯಲ್ಲಿ ಭಾಗವಹಿಸಿಲ್ಲ, ಪಕ್ಷದ ಪರವಾಗಿ ಪ್ರಚಾರವನ್ನು ಮಾಡಿಲ್ಲ, ಇಂತಹ ವ್ಯಕ್ತಿ ಒಬ್ಬ ಶಾಸಕರ ಮೇಲೆ ಆರೋಪ ಮಾಡಿರುವುದು ಸರಿಯಲ್ಲ ಶಾಸಕರು ಅಕ್ರಮ ಭ್ರಷ್ಠಚಾರ ಮಾಡಿದ್ದರೆ ಸರಿಯಾದ ರೀತಿಯಲ್ಲಿ ದಾಖಲೆಯನ್ನು ನೀಡಲಿ ಬರೀ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.
ಜಯಸಿಂಹ ಮತ್ತು ಅವರ ತಂಡ ನಾವು ಮೂಲತ ಬಿಜೆಪಿಯವರು ಎನ್ನುತ್ತಿದ್ದಾರೆ ಆದರೆ ಮೊನ್ನೆ ನಡೆದ ಪಂ.ಪಂ.ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ನಂತರ ಕಾಂಗ್ರೆಸ್ ಮುಖಂಡರು ಮಾಜಿ ಸಚಿವರಾದ ಅಂಜನೇಯರವರ ಬಳಿ ಹೋಗಿ ಕಾಂಗ್ರೆಸ್ ಶಾಲು ಹಾಕಿ ನಾವು ನಿಮ್ಮ ಪಕ್ಷದವರು ಎಂದಿದ್ದಾರೆ ತದ ನಂತರ ಸಂಸದರಾದ ಗೋವಿಂದ ಕಾರಜೋಳ ರವರ ಬಳಿ ಹೋಗಿ ಬಿಜೆಪಿ ಶಾಲು ಹಾಕಿ ನಾವು ನಿಮ್ಮ ಪಕ್ಷವನ್ನು ಸೇರುತ್ತೇವೆ ಎಂದಿದಾರೆ, ಈ ರೀತಿಯಾದ ಗೊಂದಲವನ್ನು ಸೃಷ್ಟಿ ಮಾಡಿದ್ದಾರೆ ಇದಕ್ಕೆ ತಕ್ಕ ಸಾಕ್ಷಿ ನಮ್ಮ ಬಳಿ ಇದೆ ಎಂದು ಸಿದ್ದೇಶ್ ಹೇಳಿದ್ದಾರೆ.
ನಮ್ಮ ಪಕ್ಷದ ಕಾರ್ಯಕರ್ತರಿಗೆ ಈ ವಿಷಯದ ಬಗ್ಗೆ ಶಾಂತಿಯಿಂದ ಇರುವಂತೆ ಹೇಳಲಾಗಿದೆ ಇವರು ರೊಚ್ಚಿಗೆದ್ದರೆ ಅವರು ಉಳಿಯುವುದಿಲ್ಲ, ಈ ವಿಷಯದ ಬಗ್ಗೆ ಸುಮ್ಮನೆ ಇದ್ದರೆ ಓಳ್ಳೇಯದು ಇಲ್ಲವಾದರೆ ನಾವು ಸಹಾ ಅವರ ಜಾತಕವನ್ನು ಬಿಚ್ಚಿ ಇಡಬೇಕಾಗುತ್ತದೆ ಎಂದು ಸಿದ್ದೇಶ್ ಎಚ್ಚರಿಸಿದರು.
ಗೋಷ್ಟಿಯಲ್ಲಿ ಜಿ.ಪಂ. ಮಾಜಿ ಸದಸ್ಯ ತಿಪ್ಪೇಸ್ವಾಮಿ, ಪುರಸಭೆಯ ಮಾಜಿ ಅಧ್ಯಕ್ಷ ಆಶೋಕ್, ತಾ.ಪಂ. ಮಾಜಿ ಸದಸ್ಯ ಶಿವು, ಎಪಿಎಂಸಿ, ಮಾಜಿ ಅಧ್ಯಕ್ಷ ಅಂಕಪ್ಪ, ಪುರಸಭಾ ಸದಸ್ಯರಾದ ಬಸವರಾಜ್ ಯಾದವ್, ಮುರುಗೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ರೂಪ ಸುರೇಶ್, ಓಬಿಸಿ ಅಧ್ಯಕ್ಷ ಗೀರೀಶ್, ನಗರಾಧ್ಯಕ್ಷ ಪ್ರವೀಣ್, ಮಂಡಲ ಉಪಾಧ್ಯಕ್ಷ ರುದ್ರೇಗೌಡ, ಯುವ ಮೋರ್ಚಾ ಅಧ್ಯಕ್ಷ ಅರುಣ್,ಜಯನಾಯ್ಕ, ರುದ್ರೇಶ್, ಬದರಿನಾಯ್ಕ್, ಚಂದ್ರನಾಯ್ಕ್, ಧೃವಕುಮಾರ್, ವಿಜಯ್ ಸೇರಿದಂತೆ ಇತರರು ಭಾಗವಹಿಸಿದ್ದರು.