ಚಿತ್ರದುರ್ಗ : ನನ್ನ 35 ವರ್ಷದ ರಾಜಕೀಯ ಜೀವನದಲ್ಲಿ ಯಾವೂತ್ತು ಸಹಾ ಕಪ್ಪು ಚುಕ್ಕೆ ಇಲ್ಲದಂತೆ ಜನ ಸೇವೆಯನ್ನು ಗುರಿಯಾಗಿಸಿಕೊಂಡು ಕೆಲಸವನ್ನು ಮಾಡುತ್ತಾ ಬರಲಾಗಿದೆ, ಅಕ್ರಮ ಗಣಿಗಾರಿಕೆ, ಭೂಕಬಳಿಕೆ, ಒತ್ತುವರಿ ಯಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ ಇದರಲ್ಲಿ ಯಾವುದಾದರೊಂದು ಮಾಡಿರುವುದಾಗಿ ಯಾರಾದರೂ ಒಬ್ಬರು ಸಾಕ್ಷಿಯನ್ನು ಹೇಳಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುವುದಾಗಿ ಹೊಳಲ್ಕೆರೆ ಕ್ಷೇತ್ರದ ಶಾಸಕ ಡಾ.ಎಂ.ಚಂದ್ರಪ್ಪ ಸವಾಲ್ ಹಾಕಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ನನ್ನನು ತೇಜೋವಧೆ ಮಾಡುವುದಕ್ಕಾಗಿ ಕೆಲವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ನನ್ನ ಮೇಲೆ ಆರೋಪವನ್ನು ಮಾಡುವವರು ಮುಂಚೆ ಅದು ಸರಿಯಿದೇಯೇ ಎಂಬುದನ್ನು ಪರೀಶಿಲನೆ ಮಾಡಬೇಕಿದೆ, ಸುಮ್ಮನೆ ಮಾಧ್ಯಮದವರ ಮುಂಚೆ ಸುಳ್ಳು ಹೇಳುವುದರ ಮೂಲಕ ತನ್ನ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಅಂಜನೇಯನ ಮೇಲೆ ಹರಿಹಾಯ್ದರು.
ಹೊಳಲ್ಕೆರೆಯಲ್ಲಿ ನನ್ನ ಮಗನ ಹೆಸರಿನಲ್ಲಿ ದಲಿತರ ಭೂಮಿಯನ್ನು ಖರೀದಿ ಮಾಡಲಾಗಿದೆ ಎಂದು ಆರೋಪವನ್ನು ಹೊರಿಸಲಾಗಿದೆ ಆದರೆ ನಾನು ಜಮೀನನ್ನು ಖರೀಧಿ ಮಾಡಿದ್ದು 1910ರಲ್ಲಿ ಉಳಿಮೆಯನ್ನು ಮಾಡಿ ಸುಮಾರು ನಾಲ್ಕು ಜನರ ಕೈಬದಲಾಗಿ ಈಗ ನನ್ನ ಮಗನ ಹೆಸರಿಗೆ ಜಮೀನನ್ನು ಖರೀದಿ ಮಾಡಲಾಗಿದೆ ಮಾಜಿ ಸಚಿವರು ಹೇಳಿದಂತೆ ದಲಿತರ ಭೂಮಿಯನ್ನು ಕಬಳಿಸಿಲ್ಲ ಇದಕ್ಕೆ ಬೆಕಾದ ದಾಖಲೆಗಳು ನನ್ನ ಬಳಿ ಅವುಗಳನ್ನು ಪರೀಶೀಲನೆ ಮಾಡಬಹುದಾಗಿದೆ, ನನ್ನ ಬಳಿ 500 ಎಕರೆ ಭೂಮಿ ಇದೆ ಅದರಲ್ಲಿ ಅಡಿಕೆ, ತೆಂಗು ಸೇರಿದಂತೆ ಇತರೆ ಬೆಳೆಗಳನ್ನು ಹಾಕಲಾಗಿದೆ, ಇಷ್ಟು ಇರುವ ನನಗೆ ಬೇರೆಯವರ ಭೂಮಿಯನ್ನು ಕಬಳಿಸುವ ಕೀಳು ಮಟ್ಟಕ್ಕೆ ಹೋಗುವುದಿಲ್ಲ ಎಂದು ಕಿಡಿ ಕಾರಿದರು.
ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಹೋಬಳಿಯ ಹೀರೇಕಂದವಾಡಿ ಗ್ರಾಮದ ರಿ.ಸ.ನಂ 91/5ರಲ್ಲಿ 4.04 ಖರಾಬು 0.06 ಗುಂಟೆ ಒಟ್ಟು ವಿಸ್ತಿರ್ಣ 3-38 ಗಂಟೆಯನ್ನು ಲಿಂಗಾಯತ, ಭೋವಿ ಈಡಿಗರವರಿಂದ ಹಾಗೂ ಇದೇ ಗ್ರಾಮದ ರಿ.ಸ.ನಂ.91/1ಬಿ2 ಒಟ್ಟು8-00 ಎಕರೆ ಖರಾಬು 0.12 ಗುಂಟೆ ಒಟ್ಟು ವಿಸ್ತೀರ್ಣ 7-28 ಗುಂಟೆ ಭೂಮಿಯನ್ನು ಲಿಂಗಾಯಿತ, ಈಡಿಗ ಸಮುದಾಯದಿಂದ ಸರ್ಕಾರದ ದಾಖಲಾತಿಯಂತೆ ಖರೀದಿ ಮಾಡಲಾಗಿದೆ ಇದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ ಎಲ್ಲವು ಸಹಾ ಪಾರದರ್ಶಕವಾಗಿದೆ. ಮಾಜಿ ಸಚಿವರು ದಲಿತರ ಭೂಮಿಯನ್ನು ಖರೀದಿ ಮಾಡಿದ್ದಾರೆ ಎಂದು ದೂರಿದ್ದಾರೆ ಆದರೆ 1910ರಲ್ಲಿ ಪರಿಶಿಷ್ಟರಿಗೆ ಕಾಯ್ದೆ ಇರಲಿಲ್ಲ ಎಂಬ ಅರಿವು ಅವರಿಗೆ ಇಲ್ಲವಾಗಿದೆ ಎಂದು ಚಂದ್ರಪ್ಪ ತಿಳಿಸಿದರು.
ಮಾಜಿ ಸಚಿವರು ನಿಮೆಗೆ ಬೇರೆಯವರ ಪಹಣಿಯನ್ನು ತೋರಿಸಿ ಯಾಮಾರಿಸಿದ್ದಾರೆ. ಇದರ ಬಗ್ಗೆ ಕೊಲಂಕುಶವಾಗಿ ತನಿಖೆಯಾಗಬೇಕಿದೆ. ತಹಶೀಲ್ದಾರವರಿಂದ ತಪ್ಪು ವರದಿಯನ್ನು ನಿರ್ಮಾಣ ಮಾಡಲಾಗಿದೆ. ನನ್ನ ರಾಜಕೀಯ ಜೀವನ ವೈಟ್ ಪೇಪರ್ ಇದ್ದಂತೆ ಇದರಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲವಾಗಿದೆ, ನನಗೆ ಕೆಟ್ಟ ಕೆಲಸವನ್ನು ಮಾಡಿದ ಅನುಭವ ಇಲ್ಲ ಅವರ ಮಾತಿನಲ್ಲಿ ಅರ್ಥ ಇಲ್ಲವಾಗಿದೆ. ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ ಅದು ಅತ್ಯಕ್ಕೆ ದೂರವಾದ ಆರೋಪವಾಗಿದೆ ಎಂದರು.
































