ಪತಿ-ಪತ್ನಿ ವಿವಾದ ಅಥವಾ ದಾಂಪತ್ಯ ಕಲಹಗಳಲ್ಲಿ ಯಾವುದೇ ಸಂದರ್ಭದಲ್ಲೂ ಮೊಬೈಲ್ ರೆಕಾರ್ಡಿಂಗ್ನ್ನು ಸಾಕ್ಷಿಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಛತ್ತೀಸ್ಗಢ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪರಸ್ಪರ ಒಪ್ಪಿಗೆ ಇಲ್ಲದೆ ಮೊಬೈಲ್ ಕರೆಗಳನ್ನು ರೆಕಾರ್ಡ್ ಮಾಡುವುದು ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಗೌಪ್ಯತೆಯ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.
ಪತಿ-ಪತ್ನಿಯರ ನಡುವಿನ ಮೊಬೈಲ್ ರೆಕಾರ್ಡಿಂಗ್ನ್ನು ಸಾಕ್ಷಿಯಾಗಿ ಪ್ರಸ್ತುತಪಡಿಸಲು ಅನುಮತಿ ನೀಡಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಛತ್ತೀಸ್ಗಢ ಹೈಕೋರ್ಟ್ ರದ್ದುಮಾಡಿದೆ.
ತಮ್ಮ ಮತ್ತು ಪತ್ನಿ ನಡುವಿನ ಸಂಭಾಷಣೆಯನ್ನು ತಮಗೆ ತಿಳಿಯದೆ ರಹಸ್ಯವಾಗಿ ರೆಕಾರ್ಡ್ ಮಾಡಲಾಗಿದೆ. ಈ ಕ್ರಮವು ಸಂವಿಧಾನಿಕ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.
ಪ್ರಕರಣದ ವಿವರ ಚತ್ತೀಸ್ಘಡದ ಮಹಾಸಮುಂದ್ ಜಿಲ್ಲೆಯಲ್ಲಿನ ಪ್ರಕರಣದಲ್ಲಿ ಪತ್ನಿಯು ಪತಿಯಿಂದ ಜೀವನಾಂಶವನ್ನು ಪಡೆಯಲು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನಂತರ ಪತಿಯು ತನ್ನ ಪತ್ನಿ ಜೊತೆಗಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ನ್ಯಾಯಾಲಯದಲ್ಲಿ ಹಾಜರುಪಡಿಸಲು ಕೋರ್ಟ್ ಅನುಮತಿ ಕೋರಿದರು.
ಪತಿ ತನ್ನ ಪತ್ನಿಯ ಸ್ವಭಾವದ ಬಗ್ಗೆ ಆರೋಪ ಮಾಡಿದ್ದರು. ನ್ಯಾಯಾಲಯವು ಪತಿಯ ಬೇಡಿಕೆಯನ್ನು ಅಂಗೀಕರಿಸಿತು. ಮತ್ತು ರೆಕಾರ್ಡಿಂಗ್ನ್ನು ಸಾಕ್ಷಿಯಾಗಿ ತೆಗೆದುಕೊಂಡಿತು. ಕೌಟುಂಬಿಕ ನ್ಯಾಯಾಲಯದಲ್ಲಿ ಈ ತೀರ್ಪಿನ ವಿರುದ್ಧ ಪತ್ನಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.