ಚಿತ್ರದುರ್ಗ : ಪ್ರವಾದಿ ಮಹಮದ್ ಪೈಗಂಬರ್ರವರು ಜನಿಸಿದ ತಿಂಗಳು ಸೆ.3 ರಿಂದ 14 ರವರೆಗೆ ಹನ್ನೆರಡು ದಿನಗಳ ಕಾಲ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯಕರ್ತ ಅಬ್ದುಲ್ ರೆಹಮಾನ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕ ಪ್ರವಾದಿ ಮಹಮದ್ ಪೈಗಂಬರ್ ಕೇವಲ ಮುಸ್ಲಿಂರಿಗಷ್ಟೆ ಅಲ್ಲ. ಇಡಿ ಮನುಕುಲಕ್ಕೆ ಶಾಂತಿಯ ಸಂದೇಶ ಸಾರಿದ್ದಾರೆ. ಇಸ್ಲಾಂ, ಪ್ರವಾದಿ, ಕುರಾನ್ ಬಗ್ಗೆ ಕೆಲವರು ಜನರ ಮನಸ್ಸಿನಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ. ಅದಕ್ಕಾಗಿ ಪೈಗಂಬರ್ರವರ ಸತ್ಯ ಸಂದೇಶವನ್ನು ಜನರಿಗೆ ತಲುಪಿಸುವುದಕ್ಕಾಗಿ ಅಭಿಯಾನ ಏರ್ಪಡಿಸಿದ್ದು, ರಕ್ತದಾನ ಶಿಬಿರ, ವೃದ್ದಾಶ್ರಮ, ಅನಾಥಾಶ್ರಮಗಳಿಗೆ ಭೇಟಿ ನೀಡಲಾಗುವುದು ಎಂದು ಹೇಳಿದರು.
ಪ್ರವಾದಿ ಮಹಮದ್ ಪೈಗಂಬರ್ರವರು ಭೂಮಿಗೆ ಬಂದು 1500 ವರ್ಷಗಳಾಗಿರುವುದರಿಂದ ರಾಜ್ಯಾದ್ಯಂತ ಪೈಗಂಬರ್ರವರ ಜೀವನ ಮತ್ತು ಸಂದೇಶವನ್ನು ಜನರ ಬಳಿಗೆ ಕೊಂಡೊಯ್ಯಲಾಗುವುದು. ನ್ಯಾಯದ ಹರಿಕಾರ ಪ್ರವಾದಿ ತತ್ವ ಸಿದ್ದಾಂತಗಳಿಗೆ ಕಳಂಕ ತರುವ ಕೆಲಸವಾಗುತ್ತಿದೆ. ಸಕಲ ಜೀವರಾಶಿಗಳಿಗೆ ಒಳಿತು ಬಯಸುವುದು ಅವರ ಉದ್ದೇಶವಾಗಿತ್ತು ಎಂದರು.
ಸೀರತ್ ಪ್ರವಚನ, ವಿಚಾರ ಗೋಷ್ಠಿ, ಸಂವಾದ, ವಿಚಾರ ವಿನಿಮಯ ಕಾರ್ಯಕ್ರಮ ವಿಶೇಷವಾಗಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರವಾದಿ ಮಹಮದ್ ಪೈಗಂಬರ್ರವರ ಕುರಿತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಸೀರತ್ ಅಭಿಯಾನಕ್ಕೆ ಸಂಬಂಧಿಸಿದ ಪೋಲ್ಡರ್ಗಳನ್ನು ವಿತರಿಸಲಾಗುವುದೆಂದರು.
ಜಮಾಅತೆ ಇಸ್ಲಾಮಿ ಹಿಂದ್ ಶಿವಮೊಗ್ಗ ವಲಯ ಸಂಚಾಲಕ ಸಲೀಂ ಉಮ್ರಿ, ಜಿಲ್ಲಾ ಸಂಚಾಲಕ ಮುಕರ್ರಂ ಸಯೀದ್, ಝಬೇರ್ ಅನ್ಸಾರಿ, ಕಾರ್ಯಕರ್ತರುಗಳಾದ ಡಾ.ರಹಮತ್ವುಲ್ಲಾ, ಸಿರಾಜುದ್ದಿನ್, ಫೈಜಾನ್, ಹಮ್ಮಾದ್ ಸುವೇದ್, ಟಿ.ಶಫಿವುಲ್ಲಾ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.