ಉಡುಪಿ: ದುಬೈ ಟ್ರಾವೆಲ್ ಹಿಸ್ಟರಿ ಹೊಂದಿರುವ ಉಡುಪಿಯ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್ ಕಾಣಿಸಿಕೊಂಡಿದೆ. ಸದ್ಯ ಆ ವ್ಯಕ್ತಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾಗಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದರು.
ಆದರೂ ಆ ವ್ಯಕ್ತಿಯ ಸ್ಯಾಂಪಲ್‌ಅನ್ನು ಲ್ಯಾಬ್‌ಗೆ ಕಳಿಸಲಾಗಿದ್ದು ಆರೋಗ್ಯಾಧಿಕಾರಿಗಳು ರಿಪೋರ್ಟ್ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಮಾಹಿತಿ ನೀಡಿದ್ದು, ಈ ವ್ಯಕ್ತಿಯ ಯಾವುದೇ ಸಂಬಂಧಿಕರಲ್ಲಿ ರೋಗಲಕ್ಷಣಗಳು ಕಂಡುಬಂದಿಲ್ಲ, ಅವರು ಬೇರೆ ಕಡೆಯಿಂದ ಬಂದಿರುವ ವ್ಯಕ್ತಿ. ಅವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಅವರ ಎಲ್ಲಾ ಸಂಬಂಧಿಕರನ್ನು ಚೆಕ್ ಮಾಡಲಾಗಿದೆ. ಯಾರಲ್ಲೂ ರೋಗಲಕ್ಷಣ ಕಂಡುಬಂದಿಲ್ಲ, ಆ ವ್ಯಕ್ತಿ ಕೂಡ ಯಾರನ್ನೂ ಸಂಪರ್ಕ ಮಾಡಿಲ್ಲ, ವಿದೇಶದಿಂದ ಬಂದವರು ನೇರವಾಗಿ ಆಸ್ಪತ್ರೆಗೆ ಬಂದಿದ್ದಾರೆ. ಯಾವುದೇ ಆತಂಕದ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.