ನೈರುತ್ಯ ಮುಂಗಾರು ಮೇ 27ರ ಬದಲು ಮೇ 24-25ರಂದು ಕೇರಳ ತಲುಪುವ ನಿರೀಕ್ಷೆಯಿದ್ದು, ದೇಶಾದ್ಯಂತ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ಐದು ದಿನಗಳವರೆಗೆ ಕರ್ನಾಟಕ ಸೇರಿ ದೇಶದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ವಾಯುವ್ಯ ಭಾರತದಲ್ಲಿ ತೀವ್ರ ಶಾಖದ ಅಲೆಗಳ ಪರಿಸ್ಥಿತಿಗಳು, ಬಿರುಗಾಳಿಗಳು ಮತ್ತು ರಾತ್ರಿ ವೇಳೆ ಬಿಸಿಯ ಹವಾಮಾನದ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಪಶ್ಚಿಮ ಕರಾವಳಿಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದರೆ, ಪೂರ್ವ ಮತ್ತು ಮಧ್ಯ ಭಾರತದಲ್ಲಿ ಗುಡುಗು ಸಹಿತ ಮಳೆ, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆ ನೀಡಿದೆ.
ಮುಂದಿನ ಮೂರು ದಿನಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ಮತ್ತು ಗುಡುಗು, ಮಿಂಚು ಸಹಿತ ಮಳೆ ಯಾಗಲಿದೆ ಈ ವರ್ಷ ಮೊದಲ ಬಾರಿಗೆ, ಮೇ ತಿಂಗಳಲ್ಲಿ ವಾಯುವ್ಯ ಭಾರತ ಸೆಖೆಯ ಬದಲು ಮಳೆ ಕಾಣುತ್ತಿದೆ.