ಚಲಿಸುತ್ತಿದ್ದ ಬಸ್ ನಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಬಳಿಕ ಬಸ್ಸಿನ ಕಿಟಕಿಯಿಂದ ಮಗುವನ್ನು ಹೊರಗೆಸೆದಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಪರ್ಭಾನಿ ಎಂಬಲ್ಲಿ ಈ ಘಟನೆ ನಡೆದಿದೆ. ಸ್ಲೀಪರ್ ಬಸ್ ನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ತನ್ನ ಪತಿ ಸಹಾಯದಿಂದ ನವಜಾತ ಶಿಶುವನ್ನು ಬಸ್ ಕಿಟಕಿಯಿಂದ ಹೊರಗೆಸೆದಿದ್ದಾಳೆ. ಗಂಭೀರವಾಗಿ ಗಾಯಗೊಂಡ ಕಂದಮ್ಮ ಸಾವನ್ನಪ್ಪಿದೆ.
ಯುವತಿ ಹಾಗೂ ಆಕೆಯ ಗೆಳೆಯ ಸಂತ ಪ್ರಯಾಗ್ ಟ್ರಾವೆಲ್ಸ್ ಸ್ಲೀಪರ್ ಬಸ್ ನಲ್ಲಿ ಪುಣೆಯಿಂದ ಪರ್ಭಾನಿಗೆ ಪ್ರಯಾಣಿಸುತ್ತಿದ್ದರು. ಬಸ್ ನಲ್ಲಿಯೇ ಯುವತಿ ಮಗುವಿಗೆ ಜನ್ಮ ನೀಡಿದಾಳೆ. ಆಕೆಯ ಜೊತೆ ಆಕೆಯ ಪತಿ ಅಲ್ತಾಫ್ ಶೇಖ್ ಎಂಬಾತ ಕೂಡ ಇದ್ದ. ಹೆರಿಗೆಯಾದ ಕೆಲವೇ ಸಮಯದಲ್ಲಿ ಜೋಡಿ ಬಟ್ಟೆಯಲ್ಲಿ ಮಗುವನ್ನು ಸುತ್ತಿ ಬಸ್ ಕಿಟಕಿಯಿಂದ ಮಗುವನ್ನು ಎಸೆದಿದ್ದಾರೆ. ಯುವತಿ ಬಸ್ ಕಿಟಕಿಯಿಂದ ವಾಂತಿ ಮಾಡುತ್ತಿದ್ದಾಳೆ ಎಂದು ಇತರ ಪ್ರಯಾಣಿಕರು ಹೇಳುತ್ತಿದ್ದರು. ಆದರೆ ಬಸ್ ಹಿಂದಿನಿಂದ ಬೈಕ್ ನಲ್ಲಿ ಬರುತ್ತಿದ್ದ ಬೈಕ್ ಸವಾರನೊಬ್ಬನಿಗೆ ಬಸ್ ಕಿಟಕಿಯಿಂದ ಏನೋ ಎಸೆದ ಅನುಮಾನ ಬಂದಿದೆ. ತಕ್ಷಣ ಬೈಕ್ ನಿಲ್ಲಿಸಿ ಪರಿಶೀಲಿಸಿದಾಗ ಬಟ್ಟೆಯಲ್ಲಿ ಸುತ್ತಿದ್ದ ನವಜಾತ ಶಿಶು ಕಂದು ಶಾಕ್ ಆಗಿದ್ದಾನೆ.
ತಕ್ಷಣ ತುರ್ತು ಸಹಾಯವಾಣಿಗೆ ಕರೆ ಮಾಡಿದ್ದಾನೆ. ಪೊಲೀಸ್ ಗಸ್ತು ತಣ್ಡ ಬಸ್ ತಡೆದು ಪರಿಶೀಲಿಸಿದಾಗ ಜೋಡಿ ಸಿಕ್ಕಿ ಹಾಕಿಕೊಂಡಿದೆ. ವಿಚಾರಣೆ ವೇಳೆ ಮಗು ಬೆಳೆಸಲು ಸಾಧ್ಯವಿಲ್ಲ ಎಂದು ಮಗುವನ್ನು ಎಸೆದಿದ್ದಾಗಿ ಜೋಡಿ ಒಪ್ಪಿಕೊಂಡಿದೆ. ಬಸ್ ನಿಂದ ಬಿದ್ದ ಹೊಡೆತಕ್ಕೆ ಶಿಶು ಸಾವನ್ನಪ್ಪಿದೆ.