ನವದೆಹಲಿ : ಸಂವಿಧಾನ ಅಂಗೀಕಾರದ 75ನೇ ವರ್ಷಾಚರಣೆಯ ವಿಶೇಷ ಚರ್ಚೆ ಇಂದು ಆರಂಭವಾಗಿದೆ. ವಯನಾಡಿನಿಂದ ಆಯ್ಕೆಯಾಗಿರುವ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಲೋಕಸಭೆಯಲ್ಲಿ ಚರ್ಚೆಯ ವೇಳೆ ಚೊಚ್ಚಲ ಭಾಷಣ ಮಾಡಿದ್ದಾರೆ.
ಸದನದಲ್ಲಿ ಪ್ರಿಯಾಂಕಾ ಗಾಂಧಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲ . ಮಹಿಳೆಯರಿಗೆ ಧ್ವನಿ ಎತ್ತುವ ಅಧಿಕಾರವನ್ನು ಸಂವಿಧಾನ ನೀಡಿದೆ.ಆಡಳಿತ ಪಕ್ಷದವರು ಸಂವಿಧಾನ ಬದಲಿಸುತ್ತಿದ್ದರು ಇದರೊಂದಿಗೆ ಲೋಕಸಭೆ ಚುನಾವಣೆ ಫಲಿತಾಂಶ ಈ ರೀತಿ ಬರದೇ ಇದ್ದಿದ್ದರೆ ಆಡಳಿತ ಪಕ್ಷದಿಂದ ಬಂದವರೇ ಸಂವಿಧಾನ ಬದಲಿಸುತ್ತಿದ್ದರು ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ದೇಶದ ಸಂವಿಧಾನ ಬಡವರಿಗೆ ಒಳಿತು ಮಾಡಿದೆ. ಇದರಿಂದ ಬಡವರು ಮತ್ತು ಮಹಿಳೆಯರಿಗೆ ಧ್ವನಿಯಾಗಿದ್ದಾರೆ.
ಈಗಿನ ಸರ್ಕಾರ ಮೀಸಲಾತಿಯನ್ನು ದುರ್ಬಲಗೊಳಿಸುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಜಾತಿ ಗಣತಿ ಇಂದಿನ ಅಗತ್ಯ. ಆಡಳಿತ ಪಕ್ಷದವರು ಜಾತಿ ಗಣತಿಯಲ್ಲಿ ಮಂಗಳಸೂತ್ರದ ಬಗ್ಗೆ ಮಾತನಾಡುತ್ತಾರೆ. ಸಂವಿಧಾನವೇ ನಮ್ಮ ಧ್ವನಿ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಸಂವಿಧಾನವು ಚರ್ಚೆಯ ಹಕ್ಕನ್ನು ನೀಡಿದೆ. ಸಂವಿಧಾನವು ಸಾಮಾನ್ಯರಿಗೆ ಸರ್ಕಾರವನ್ನು ಬದಲಾಯಿಸುವ ಅಧಿಕಾರವನ್ನು ನೀಡಿದೆ ಎಂದರು.ನಮ್ಮ ಸಂವಿಧಾನವು ರಕ್ಷಣಾತ್ಮಕ ಗುರಾಣಿಯಾಗಿದೆ. ನಾಗರಿಕರನ್ನು ಸುರಕ್ಷಿತವಾಗಿರಿಸುವ ರಕ್ಷಣಾ ಕವಚ. ಕಳೆದ 10 ವರ್ಷಗಳಲ್ಲಿ ದೊಡ್ಡ ಮಟ್ಟದ ಹಕ್ಕುಗಳನ್ನು ನೀಡುತ್ತಾ ಬಂದಿರುವ ಆಡಳಿತ ಪಕ್ಷದ ಸಹೋದ್ಯೋಗಿಗಳು ಈ ಕವಚವನ್ನು ಮುರಿಯಲು ಇನ್ನಿಲ್ಲದ ಪ್ರಯತ್ನ ನಡೆಸಿರುವುದು ಬೇಸರದ ಸಂಗತಿ ಎಂದು ಹೇಳಿದರು.