ಅಮರಾವತಿ: ಆಂಧ್ರಪ್ರದೇಶ ಮಾಜಿ ಸಿಎಂ ಜಗನ್ ರೆಡ್ಡಿ ಪಕ್ಷ ವೈ.ಎಸ್.ಆರ್.ಕಾಂಗ್ರೆಸ್ ನಾಯಕ, ಸಂಸದ ವಿ.ವಿಜಯ ಸಾಯಿ ರೆಡ್ಡಿ ಜ.25ಕ್ಕೆ ರಾಜ್ಯಸಭೆಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
“ಬೇರೆ ಯಾವುದೇ ಪಕ್ಷಕ್ಕೆ ಸೇರಲ್ಲ.ರಾಜಕೀಯ ತೊರೆಯುತ್ತಿದ್ದೇನೆ. ನಾನು ಯಾವುದೇ ಸ್ಥಾನ, ಲಾಭ ಅಥವಾ ಹಣಕ್ಕಾಗಿ ರಾಜೀ ನಾಮೆ ನೀಡುತ್ತಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ ಯಾವುದೇ ಒತ್ತಡವಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.