ಚಿತ್ರದುರ್ಗ; ದೇಶದ ಹೆಮ್ಮೆಯ ವೀರ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಹಾಗೂ ಅವರ ಜೀವ ರಕ್ಷಣೆಗಾಗಿ ನಗರದ ಮೆದೆ ಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಬೆಳಗಿನ ಜಾವ 8-30 ಕೆ ಅಯ್ಯಪ್ಪ ಸ್ವಾಮಿ ದೇವರಿಗೆ ವಿಶೇಷವಾದ ಹೂವಿನ ಅಲಂಕಾರ ಹಾಗೂ ಮಹಾ ಮೃತ್ಯುಂಜಯ ಹೋಮವನ್ನು ನೆರವೇರಿಸಲಾಯಿತು.
ಪಾಕಿಸ್ತಾನದ ಉಗ್ರರ ವಿರುದ್ಧ ಹೋರಾಡುತ್ತಿರುವ ಭೂ ಸೇನೆ ವಾಯು ಸೇನೆ ಹಾಗೂ ನೌಕಾ ಸೇನೆ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪಹಲ್ಗಾವ್ ನಲ್ಲಿ ಭಾರತೀಯರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಗೆ ಪ್ರತೀಕವಾಗಿ ಆಪರೇಷನ್ ಸಿಂಧೂರ ಯಶಸ್ವಿಗಾಗಿ ಪೂಜೆ ಹಮ್ಮಿಕೊಳ್ಳಲಾಯಿತು. ಜಾಗತಿಕ ಮಟ್ಟದಲ್ಲಿ ಉಗ್ರರ ಉತ್ಪಾದನಾ ಸ್ಥಾನವಾಗಿರುವ ಪಾಕಿಸ್ತಾನಕ್ಕೆ ಯುದ್ಧ ಮಾಡಲು ಸೈನಿಕರು ಮುಂದಾಗಿದ್ದಾರೆ ಭಾರತ ದೇಶಕ್ಕೂ ಹಾಗೂ ಸೈನಿಕರಿಗೂ ಯುದ್ಧದಲ್ಲಿ ಪಾಲ್ಗೊಳ್ಳುತ್ತಿರುವ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೂ ಯಾವುದೇ ರೀತಿಯ ಜೀವ ಹಾನಿಯಾಗದಿರಲಿ ಹಾಗೂ ಶತ್ರು ಸಂಹಾರವಾಗಲಿ.
ಯುದ್ಧವು ಬೇಗನೆ ಯುದ್ಧ ಮುಗಿದು ದೇಶದಲ್ಲಿ ಶಾಂತಿ ನೆಲಸಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರಲ್ಲಿ ಪೂಜೆ ಹಾಗೂ ಸಂಕಲ್ಪ ಮಾಡಲಾಯಿತು .ವಿಶೇಷ ಪೂಜೆ ನಂತರ ದೇವಸ್ಥಾನಕ್ಕೆ ಬಂದಂತಹ ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಯಿತು.
ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಶರಣ್ ಕುಮಾರ್ ಕಾರ್ಯದರ್ಶಿ ಎಂ ಪಿ ವೆಂಕಟೇಶ್ ಹಾಗೂ ದೇವಸ್ಥಾನದ ನಿರ್ದೇಶಕ ರಾದಂತಹ V G ಮೋಹನ್ ಕುಮಾರ್ ರೇಷ್ಮೆಮಂಜುನಾಥ್ ವಕೀಲರಾದ ವಿಜಯಕುಮಾರ್ ರಮೇಶ್ ಮೋಹನ್ ಗಾಂಧಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ರಘು ರವರು ಉಪಸ್ಥಿತರಿದ್ದರು.