ಭಟ್ಕಳ: ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವಿಗೀಡಾದ ದುರಂತಕ್ಕೆ ಸಂಬಂಧಿಸಿದಂತೆ ಮುಳಬಾಗಿಲು ಮೊರಾರ್ಜಿ ವಸತಿ ಶಾಲೆಯ ಆರು ಶಿಕ್ಷಕರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಮುರುಡೇಶ್ವರದಲ್ಲಿ ಮೊರಾರ್ಜಿ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಲಾ (40), ಶಿಕ್ಷಕರಾದ ಸುನೀಲ್ ಆರ್. (33), ಚೌಡಪ್ಪ ಎಸ್. (34), ವಿಶ್ವನಾಥ್ ಎಸ್. (27), ಶಾರದಮ್ಮ ಸಿ.ಎನ್. (37), ನರೇಶ ಕೆ. (30) ವಿರುದ್ಧ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
