ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು “ಚುನಾವಣೆಯ ಹಿಂದೂ” ಎಂದು ಕರೆಯುವ ಮೂಲಕ ಬಿಜೆಪಿ ಟೀಕಿಸಿತ್ತು. ಈ ಬೆನ್ನಲ್ಲೇ ದೆಹಲಿ ಆಡಳಿತ ಪಕ್ಷವು (ಎಎಪಿ) ಬಿಜೆಪಿಯ ಅಮಿತ್ ಶಾ ಅವರನ್ನು “ಚುನಾವಣೆ ಮುಸಲ್ಮಾನ್” ಎಂದು ಲೇವಡಿ ಮಾಡುವ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ‘ಚುನಾವಣೆ ಹತ್ತಿರ ಬಂದ ತಕ್ಷಣ ಬಿಜೆಪಿಗೆ ಮುಸ್ಲಿಮರು ಏಕೆ ನೆನಪಾಗುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ’ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಫೆಬ್ರವರಿ 5ರಂದು ದೆಹಲಿ ಚುನಾವಣೆ ನಿಗದಿಯಾಗಿದೆ.
