ಬೆಂಗಳೂರು: ಶೀಘ್ರದಲ್ಲಿಯೇ ನಂದಿನಿ ಹಾಲಿನ ದರ ಏರಿಕೆಗೆ ಸರ್ಕಾರ ಭರ್ಜರಿ ತಯಾರಿ ನಡೆಸುತ್ತಿದೆ.
ಕೆಲ ದಿನಗಳ ಹಿಂದೆ ಹಾಲು ದರ ಏರಿಸುವಂತೆ ಕೆಎಂಎಫ್ ಮುಂದೆ ರೈತರು ಪ್ರತಿಭಟನೆ ನಡೆಸಿದ್ರು.. ಜತೆಗೆ ಹಾಲು ಒಕ್ಕೂಟಗಳಿಂದ ನಂದಿನಿ ಹಾಲಿನ ದರ ಏರಿಸುವಂತೆ ಕೆಎಂಎಫ್ ಗೆ ಒತ್ತಡ ಹೇರಲಾಗಿತ್ತು.
ಪ್ರತಿ ಲೀಟರ್ ಗೆ ₹5ರೂ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು..ಸದ್ಯ ಸಿಎಂ ಅಂಗಳದಲ್ಲಿ ನಂದಿನಿ ಹಾಲಿನ ದರ ಏರಿಕೆ ಚೆಂಡು ಬಿದ್ದಿದ್ದು ಮುಖ್ಯಮಂತ್ರಿಗಳ ಅನುಮತಿಗಾಗಿ ಕೆಎಂಎಫ್ ಆಡಳಿತ ಮಂಡಳಿ ಕಾಯುತ್ತಿದೆ.
ಕಳೆದ ವರ್ಷ ಜೂನ್ ನಲ್ಲಿ ಹಾಲಿನ ದರ ಏರಿಕೆ ಮಾಡಿದ್ದ ಕೆಎಂಎಫ್ ಈ ವರ್ಷವೂ ರೈತರ ಮತ್ತು ಒಕ್ಕೂಟದ ಒತ್ತಾಯದ ಮೇರೆಗೆ ಮತ್ತೆ ದರ ಏರಿಸುವಂತೆ ಸರ್ಕಾರದ ಮೇಲೆ ಕೆಎಂಎಫ್ ಒತ್ತಡ ಹೇರುತ್ತಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.. ಕೆಲವೇ ದಿನದಲ್ಲಿ ಹಾಲಿನ ದರ ಏರಿಕೆ ಆಗುವ ಸಾಧ್ಯತೆಯೂ ಇದೆ..