ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು 2014-15ರಿಂದ ಜಾರಿಗೆ ತಂದಿರುವ ರಾಷ್ಟ್ರೀಯ ಜಾನುವಾರು ಮಿಷನ್ (NLM) ಯೋಜನೆ, 2021-22ರಿಂದ ಪರಿಷ್ಕೃತ ರೂಪದಲ್ಲಿ ಮುಂದುವರೆದಿದೆ. ಈ ಯೋಜನೆಯು ಉದ್ಯಮಶೀಲತೆ, ಉದ್ಯೋಗ ಸೃಷ್ಟಿ, ಪ್ರಾಣಿ ಉತ್ಪಾದಕತೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಯೋಜನೆಯ ಉದ್ದೇಶಗಳು
ಅಸಂಘಟಿತ ಕೋಳಿ ಸಾಕಾಣಿಕೆ ವಲಯವನ್ನು ಸಂಘಟಿತ ವಲಯಕ್ಕೆ ತರುವುದು.
ಗ್ರಾಮೀಣ ವ್ಯವಹಾರಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು
ಉತ್ಪಾದಕರಿಗೆ ಮುಂದಕ್ಕೆ ಮತ್ತು ಹಿಂದಕ್ಕೆ ಸಂಪರ್ಕ ಕಲ್ಪಿಸುವುದು.
ಕಡಿಮೆ ವೆಚ್ಚದ ಆಹಾರ ಮಾರ್ಗಗಳನ್ನು ಜನಪ್ರಿಯಗೊಳಿಸುವುದು.
ಯಾರಿಗೆ ಅನುಕೂಲ?
ವ್ಯಕ್ತಿಗಳುಸ್ವಸಹಾಯ ಗುಂಪುಗಳು (SHG)ರೈತ ಉತ್ಪಾದಕ ಸಂಸ್ಥೆಗಳು (FPO)ರೈತರ ಸಹಕಾರ ಸಂಘಗಳು (FCO)ಜಂಟಿ ಹೊಣೆಗಾರಿಕೆ ಗುಂಪುಗಳು (JLG)ವಿಭಾಗ 8 ಕಂಪನಿಗಳು.
ಸಬ್ಸಿಡಿ ಎಷ್ಟು ಸಿಗುತ್ತೆ?
ಒಟ್ಟು ಯೋಜನೆಯ ವೆಚ್ಚದ 50%ವರೆಗೆ ಅಥವಾಗರಿಷ್ಠ ₹25 ಲಕ್ಷದವರೆಗೆ ಬಂಡವಾಳ ಸಬ್ಸಿಡಿಸಬ್ಸಿಡಿ ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಯಾವ ಯೋಜನೆಗಳಿಗೆ ಸಬ್ಸಿಡಿ ಸಿಗುತ್ತೆ?
ಕನಿಷ್ಠ 1000 ಪೋಷಕ ಹಕ್ಕಿಗಳಿರುವ ಫಾರ್ಮ್ಗಳುಗ್ರಾಮೀಣ ಮೊಟ್ಟೆ ಕೇಂದ್ರಗಳುಮರಿ ಉತ್ಪಾದನಾ ಘಟಕಗಳುತಾಯಿಯ ಘಟಕಗಳಲ್ಲಿ ಮರಿ ಸಾಕಾಣಿಕೆ (Bruder cum mother units).
ಪಕ್ಷಿ ಪೂರೈಕೆಗಾಗಿ ಅರ್ಹ ಸಂಸ್ಥೆಗಳು
ಕೇಂದ್ರೀಯ ಕೋಳಿ ಅಭಿವೃದ್ಧಿ ಸಂಸ್ಥೆಗಳುಪಕ್ಷಿ ಸಂಶೋಧನಾ ಸಂಸ್ಥೆಗಳುಖಾಸಗಿ ಪ್ರಮಾಣಿತ ಘಟಕಗಳುಪಶುವೈದ್ಯಕೀಯ ವಿಶ್ವವಿದ್ಯಾಲಯಗಳು.
ಅರ್ಜಿಗೆ ಅಗತ್ಯವಿರುವ ದಾಖಲೆಗಳು
ಯೋಜನಾ ವರದಿ ಪಹಣಿ ಪ್ರತಿಗಳು ಆಧಾರ್ ಕಾರ್ಡ್ಪಾನ್ ಕಾರ್ಡ್ಪಾಸ್ಪೋರ್ಟ್ ಫೋಟೋಜಿಪಿಎಸ್ ಫೋಟೋ (ಜಾಗದ)ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ತರಬೇತಿ ಪ್ರಮಾಣ ಪತ್ರ.
ಅರ್ಜಿಯ ವಿಧಾನ
ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ: nlm.udyamimitra.in
ಅರ್ಜಿ ಸಲ್ಲಿಸಲು ನೇರ ಲಿಂಕ್: nlm.udyamimitra.in/Login/Login.
ಮೂಲಸೌಕರ್ಯ ಖರ್ಚು ಮತ್ತು ಬ್ಯಾಂಕ್ ಗ್ಯಾರಂಟಿ ಬಗ್ಗೆ
ಖರ್ಚಿನ 25% ವೆಚ್ಚವನ್ನು ಅಭ್ಯರ್ಥಿಯು ಮೊದಲು ಮಾಡಬೇಕು
ಯೋಜನೆ ಮುಗಿಸಿದ ಬಳಿಕ ಮಾತ್ರ ಉಳಿದ ಸಬ್ಸಿಡಿ ಬಿಡುಗಡೆ
ಸ್ವ-ಹಣಕಾಸಿನ ಯೋಜನೆಯು ಬ್ಯಾಂಕ್ ಮೌಲ್ಯಮಾಪನ ಅಗತ್ಯ
ಮೂರು ವರ್ಷಗಳವರೆಗೆ ಮಾನ್ಯವಿರುವ ಬ್ಯಾಂಕ್ ಗ್ಯಾರಂಟಿ ಕೊಡಬೇಕು
ಇದು ಕುರಿ, ಕೋಳಿ, ಮೇಕೆ ಸಾಕಾಣಿಕೆಗೆ ಆಸಕ್ತ ಇರುವವರಿಗೆ ಉತ್ತಮ ಅವಕಾಶ. ನೀವು ರೈತ ಅಥವಾ ಮಹಿಳಾ ಸಂಘದ ಸದಸ್ಯರಾದರೂ, ಈ ಯೋಜನೆಯಿಂದ ವ್ಯಾಪಕವಾಗಿ ಲಾಭ ಪಡೆಯಬಹುದು.