ನುಗ್ಗೆಕಾಯಿ ತಿನ್ನೋದ್ರಿಂದ ಆಗುವ ಪ್ರಯೋಜನಗಳು
ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ – ಮಧುಮೇಹ ಇರುವವರಿಗೆ ನುಗ್ಗೆಕಾಯಿ ಸೇವನೆ ಅತ್ಯುತ್ತಮ ಪ್ರಯೋಜನ ನೀಡಬಹುದು. ಇದು ಪಿತ್ತಕೋಶದ ಕಾರ್ಯವನ್ನು ಉತ್ತೇಜಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ – ನುಗ್ಗೆಕಾಯಿಯಲ್ಲಿ ಇರುವ ವಿಟಮಿನ್ B12, ನಿಯಾಸಿನ್, ರೈಬೋಫ್ಲೇವಿನ್ ಜೀರ್ಣಕ್ರಿಯೆ ಸುಗಮಗೊಳಿಸುತ್ತವೆ. ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡಿ, ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ.
ಉಸಿರಾಟದ ಕಾಯಿಲೆಗಳಿಗೆ ತಡೆ – ಉರಿಯೂತ ನಿವಾರಕ ಗುಣಲಕ್ಷಣಗಳಿರುವ ನುಗ್ಗೆಕಾಯಿ ಉಸಿರಾಟ ಸಮಸ್ಯೆ, ಅಸ್ತಮಾ, ಮತ್ತು ಶೀತ-ಕೆಮ್ಮು ತಡೆಯಲು ಸಹಾಯ ಮಾಡುತ್ತದೆ.
ಮೂಳೆಗಳನ್ನು ಬಲಪಡಿಸುತ್ತದೆ – ಕ್ಯಾಲ್ಸಿಯಂ ಮತ್ತು ಕಬ್ಬಿಣದಿಂದ ಸಮೃದ್ಧವಾದ ನುಗ್ಗೆಕಾಯಿ, ಮೂಳೆಯ ಆರೋಗ್ಯವನ್ನು ಉತ್ತೇಜಿಸಿ, ಅವುಗಳನ್ನು ಬಲಪಡಿಸುತ್ತದೆ.
ರಕ್ತ ಶುದ್ಧೀಕರಣೆ – ನುಗ್ಗೆಕಾಯಿ ಪ್ರತಿಜೀವಕ ಗುಣ ಹೊಂದಿದ್ದು, ರಕ್ತದಲ್ಲಿನ ಆಮ್ಲಜನಕದ ಮಟ್ಟ ಹೆಚ್ಚಿಸಿ, ಶುದ್ಧೀಕರಣ ಮಾಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ – ನುಗ್ಗೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ C ಇರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶೀತ-ಕೆಮ್ಮು, ವೈರಲ್ ಇನ್‌ಫೆಕ್ಷನ್ ತಡೆಯಲು ಸಹಕಾರಿ.
ಮೊಡವೆಗಳು ದೂರ! – ನುಗ್ಗೆಕಾಯಿ ಶಿಲೀಂಧ್ರ ವಿರೋಧಿ ಗುಣ ಹೊಂದಿರುವುದರಿಂದ ಚರ್ಮದ ಆರೋಗ್ಯಕ್ಕಾಗಿ ಉತ್ತಮ. ನುಗ್ಗೆ ಎಲೆಗಳ ಫೇಸ್ ಮಾಸ್ಕ್ ಬಳಸಿ ಚರ್ಮವನ್ನು ತಕ್ಷಣ ಶುದ್ಧಗೊಳಿಸಬಹುದು.