4ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ನೇಹಾ ಬಯದ್ವಾಲ್

WhatsApp
Telegram
Facebook
Twitter
LinkedIn

ಛತ್ತೀಸ್‌ಗಢ :ಯುಪಿಎಸ್‌ಸಿಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲ ಅಗತ್ಯ. ಹೀಗೆ ಮೂರು ಬಾರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ, ಛಲ ಬಿಡದೆ ನಾಲ್ಕನೇ ಬಾರಿಗೆ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ನೇಹಾ ಬಯದ್ವಾಲ್ ಅವರ ಯಶೋಗಾಥೆ ಇದು.

ನೇಹಾ ಬಯದ್ವಾಲ್ ರಾಜಸ್ಥಾನದ ಜೈಪುರದಲ್ಲಿ ಜನಿಸಿದ್ದು, ಛತ್ತೀಸ್‌ಗಢದಲ್ಲಿ ಬೆಳೆದರು. ಆಕೆಯ ತಂದೆ ಶ್ರವಣ್ ಕುಮಾರ್ ಹಿರಿಯ ಆದಾಯ ತೆರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನೇಹಾ ತಂದೆಯ ಸರ್ಕಾರಿ ಕೆಲಸದಿಂದಾಗಿಯೇ ಅವರ ಕುಟುಂಬವು ಆಗಾಗ್ಗೆ ಸ್ಥಳಾಂತರಗೊಳ್ಳುತ್ತಿತ್ತು. ಹೀಗಾಗಿ ನೇಹಾ ಅವರು ಆಗ್ಗಾಗ್ಗೆ ಶಾಲೆಗಳನ್ನು ಬದಲಾಯಿಸುತ್ತಿದ್ದರು.

ನೇಹಾ ಬಯದ್ವಾಲ್ ಅವರು ತಮ್ಮ ಶಾಲಾ ಶಿಕ್ಷಣವನ್ನು ಜೈಪುರದಲ್ಲಿ ಪ್ರಾರಂಭಿಸಿದರು. ನಂತರ ಭೋಪಾಲ್‌ನ ಕಿಡ್ಜೀ ಹೈಸ್ಕೂಲ್, ಡಿಪಿಎಸ್ ಕೊರ್ಬಾ ಮತ್ತು ಛತ್ತೀಸ್‌ಗಢದ ಡಿಪಿಎಸ್ ಬಿಲಾಸ್‌ಪುರದಂತಹ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ನೇಹಾ ಅವರು ಇಷ್ಟೆಲ್ಲಾ ಶಾಲೆಗಳನ್ನು ಬದಲಾಯಿಸಿದರೂ ತನ್ನ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ನಂತರ ನೇಹಾ ರಾಯ್‌ಪುರದ ಡಿಬಿ ಗರ್ಲ್ಸ್ ಕಾಲೇಜಿಗೆ ಸೇರಿಕೊಂಡಳು, ಅಲ್ಲಿ ಅವರು ವಿಶ್ವವಿದ್ಯಾಲಯದ ಟಾಪರ್ ಆಗುತ್ತಾರೆ.

ನೇಹಾ ಅವರ ತಂದೆ ಹಿರಿಯ ಆದಾಯ ತೆರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಪ್ರೇರಿತರಾದ ಅವರು, ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಯುಪಿಎಸ್‌ಸಿಗೆ ತಯಾರಿ ಆರಂಭಿಸಿದರು. ನೇಹಾ ಅವರು ತನ್ನ ಮೊದಲ ಮೂರು ಪ್ರಯತ್ನಗಳಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗುತ್ತಾರೆ. ಹೀಗಾಗಿ ಅವರು ಮೂರು ವರ್ಷಗಳ ಕಾಲ ಮೊಬೈಲ್‌ನಿಂದ, ಸಾಮಾಜಿಕ ಜಾಲತಾಣದಿಂದ ಹಾಗೂ ಸ್ನೇಹಿತರು, ಸಂಬಂಧಿಕvದ ದೂರವಿರಲು ನಿರ್ಧರಿಸುತ್ತಾರೆ. ಈ ಮೂರು ವರ್ಷಗಳನ್ನು ಸಂಪೂರ್ಣವಾಗಿ ಯುಪಿಎಸ್‌ಸಿ ಅಧ್ಯಯನಕ್ಕೆ ಅರ್ಪಿಸುತ್ತಾರೆ.

2021 ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು, 569 ನೇ ರ‍್ಯಾಂಕ್ ಪಡೆಯುವ ಮೂಲಕ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ.

 

BC Suddi   About Us
For Feedback - [email protected]

Related News

LATEST Post

WhatsApp Icon Telegram Icon