ಬೆಂಗಳೂರು: NEET-UG ಪರೀಕ್ಷೆಯ ತಾತ್ಕಾಲಿಕ ಉತ್ತರ ಕೀಲಿಯನ್ನು NTA ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ neet.nta.nic.in ಗೆ ಭೇಟಿ ನೀಡಿ, ಉತ್ತರ ಕೀಲಿಯನ್ನು ಪರಿಶೀಲಿಸಬಹುದು ಹಾಗೂ ಡೌನ್ಲೋಡ್ ಮಾಡಬಹುದು.
ಅಭ್ಯರ್ಥಿಗಳು ಜೂ. 3-5ರ ವರೆಗೆ ತಾತ್ಕಾಲಿಕ ಕೀ ಉತ್ತರದ ಬಗ್ಗೆ ಆಕ್ಷೇಪಣೆಗಳನ್ನು ನೋಂದಾಯಿಸಬಹುದು. ಭಾರತದಾದ್ಯಂತ 557 ನಗರಗಳಲ್ಲಿ 4,750 & ವಿದೇಶದಲ್ಲಿ 14 ಕೇಂದ್ರಗಳಲ್ಲಿ ಮೇ 4ರಂದು ಈ ಪರೀಕ್ಷೆ ನಡೆಸಲಾಗಿತ್ತು. 21 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.