ಬೇಯಿಸಿದ ತರಕಾರಿಗಳನ್ನು ತಿನ್ನುವುದು ಉತ್ತಮವೇ? ಅಥವಾ ತರಕಾರಿಗಳನ್ನು ಹಸಿಯಾಗಿ ತಿಂದರೆ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಸಿಗುತ್ತಾ ಎಂಬ ಪ್ರಶ್ನೆ ಅನೇಕ ಮಂದಿಗೆ ಕಾಡುತ್ತಿದೆ.
ಕೆಲವು ಪೌಷ್ಟಿಕತಜ್ಞರು ಹೇಳುವ ಪ್ರಕಾರ ಕೆಲವು ತರಕಾರಿಗಳನ್ನು ಅತಿಯಾಗಿ ಬೇಯಿಸಿದರೆ ಅವು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತವೆ. ಇನ್ನೂ ಕೆಲವು ತರಕಾರಿಗಳನ್ನು ಹಸಿಯಾಗಿ ಎಂದಿಗೂ ತಿನ್ನಬಾರದು ಎನ್ನಲಾಗುತ್ತದೆ. ಹಾಗೇ ಕ್ಯಾರೆಟ್, ಟಮೋಟೋ, ಬೀಟ್ರೂಟ್, ಈರುಳ್ಳಿ, ಸೌತೆಕಾಯಿ ಸೇರಿ ಕೆಲವೊಂದನ್ನ ಹಾಗೇ ಹಸಿಯಾಗಿ ತಿನ್ನುತ್ತೇವೆ. ಆದರೆ ಇವುಗಳಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಈ ತರಕಾರಿಯಲ್ಲೇ ಕೆಲವೊಂದನ್ನ ಹಸಿಯಾಗಿ ತಿನ್ನಲೇಬಾರದು
. ಅವು ಯಾವುವು, ಯಾಕೆ ತಿನ್ನಬಾರದು ಎನ್ನುವುದಕ್ಕೆ ಕಾರಣ ಕೂಡ ಇದೆ. . ಬದನೆಕಾಯಿ ತಿನ್ನುವಾಗ ಹೆಚ್ಚು ಬೇಯಿಸಿ ತಿನ್ನಬೇಕು. ಇದರಿಂದ ಬದನೆಕಾಯಿ ಬೀಜದ ಒಳಗಿನ ಲಾಡಿಹುಳುವಿನ ಮೊಟ್ಟೆಗಳು ನಾಶ ಹೊಂದುತ್ತವೆ. ಕ್ಯಾಬೇಜ್ ಅಥವಾ ಎಲೆಕೋಸು ಇದನ್ನು ಹಸಿಯಾಗಿ ತಿನ್ನಬಾರದು. ಇದರಲ್ಲಿಯೇ ಅತಿ ಹೆಚ್ಚು ಲಾಡಿಹುಳು ಮತ್ತು ಅದರ ಮೊಟ್ಟೆಗಳು ಇರುತ್ತವೆ. ಇದರ ಜೊತೆಗೆ ಕ್ರಿಮಿ, ಕೀಟಗಳು ಅಧಿಕಮಟ್ಟದಲ್ಲಿರುತ್ತವೆ.
ಎಲೆಕೋಸನ್ನು ತಿನ್ನುವಾಗ ಬಿಸಿ ನೀರಿನಲ್ಲಿ ಚೆನ್ನಾಗಿ ಬೇಯಿಸಿ ಬಳಿಕ ನಮಗೆ ಬೇಕಾದಂತೆ ಸಿದ್ಧತೆ ಮಾಡಿ ತಿನ್ನಬಹುದು. ಕೆಸುವಿನ ಎಲೆ, ಪಾಲಕ್, ಬಸಳೆ ಸೊಪ್ಪು ಅನ್ನು ಬಿಸಿ ನೀರಿನಲ್ಲಿ ಬೇಯಿಸಿ ಬಳಿಕ ನಮಗೆ ಬೇಕಾದ ರೀತಿಯಲ್ಲಿ ಸಾಂಬಾರು, ಸೊಪ್ಪುಸಾರು ಸಿದ್ಧ ಮಾಡಿಕೊಳ್ಳಬಹುದು. ಕ್ಯಾಪ್ಸಿಕಾಂ ಅಥವಾ ದೊಣ್ಣೆಮೆಣಸಿನ ಕಾಯಿ ಇದರ ಕಿರೀಟ ಭಾಗ ಓಪನ್ ಮಾಡಿ ಬೀಜಗಳನ್ನು ಎಗೆದು ಅದನ್ನು ಬಿಸಿನೀರಿನಲ್ಲಿ ಮುಳುಗಿಸಬೇಕು. ಏಕೆ ಹೀಗೆ ಮಾಡಬೇಕು ಎಂದರೆ ಕ್ಯಾಪ್ಸಿಕಾಂ ಬೀಜಗಳಲ್ಲಿ ಲಾಡಿಹುಳುವಿನ ಮೊಟ್ಟೆಗಳು ಇರುವ ಸಾಧ್ಯತೆ ಇರುತ್ತದೆ.