ದೆಹಲಿ: ಟ್ವಿಟರ್ ಸಂಸ್ಥೆ ಲೇಖನಗಳು ಎಂಬ ಮತ್ತೊಂದು ಹೊಸ ಫೀಚರ್ ಅನ್ನು ತರಲಿದೆ. ದೊಡ್ಡ ಲೇಖನಗಳನ್ನೂ ಟ್ವೀಟ್ ಮಾಡಬಹುದು ಎಂದು ಎಲಾನ್ ಮಸ್ಕ್ ಬಹಿರಂಗಪಡಿಸಿದ್ದಾರೆ.
ಟ್ವಿಟರ್ ಪ್ರಸ್ತುತ ಟ್ವೀಟ್ ಮಾಡಲು 280ಅಕ್ಷರಗಳ ಮಿತಿಯನ್ನು ಹೊಂದಿದೆ. ಬ್ಲೂ ಟಿಕ್ ಚಂದಾದಾರರಿಗೆ 10,000ಅಕ್ಷರಗಳು. ಇದೀಗ ಹೊಸ ಫೀಚರ್ ದೊಂದಿಗೆ ಹೆಚ್ಚು ಅಕ್ಷರ ಹೊಂದಿರುವ ವಿಷಯವನ್ನು ಟ್ವೀಟ್ ಮಾಡಬಹುದು ಎಂದಿದೆ.
ಈ ಫೀಚರ್ ಎಲ್ಲಾ ಬಳಕೆದಾರರಿಗಾಗಿಯೇ? ಅಥವಾ ಬ್ಲೂ ಟಿಕ್ ಚಂದಾದಾರರಿಗೆ ಮಾತ್ರವೇ? ಎಂಬುವುದು ಇನ್ನೂ ತಿಳಿಸಿಲ್ಲ.