LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

-ದಾಸೋಹದ ಸಂಗಣ್ಣ ಅವರ ವಚನ.!

-ದಾಸೋಹದ ಸಂಗಣ್ಣ ಅವರ ವಚನ.!

ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು   ನಿಮ್ಮಗಳ ಅವಗಾಹನೆಗೆ  

ವಚನ:

ಮಣ್ಣಿನಲ್ಲಿ ಹುಟ್ಟಿದ ಹೊನ್ನು, ಕಲ್ಪಿನಲ್ಲಿ ಹುಟ್ಟಿದ ರನ್ನ,

ಚಿಪ್ಪಿನಲ್ಲಿ ಹುಟ್ಟಿದ ಮುತ್ತು, ವೃಕ್ಷದಲ್ಲಿ ಹುಟ್ಟಿದ ಗಂಧ

ಅವು ತಮ್ಮ ಸ್ವಸ್ಥಾನಂಗಳ ಮೀರಿ

ಪರಸ್ಥಾನಂಗಳಲ್ಲಿ ನಿಂದು ಪ್ರಾಪ್ತಿಯನೆಯ್ದುವಂತೆ,

ಪಿಂಡ ಅಂಡದಲ್ಲಿ ಹುಟ್ಟಿ ಅಂಡವನಿತಿಗಳೆದು ನಿಜ ಪಿಂಡವಾದಂತೆ,

ಗುರುವಿನ ಕರಕಮಲದಲ್ಲಿ ಹುಟ್ಟಿ,

ಲಿಂಗಮೂರ್ತಿಯ ಸರ್ವಾಂಗದಲ್ಲಿ ಬೆಳೆದು

ಜಂಗಮವಪ್ಪ ನಿರಂಗ ಪ್ರಸಾದದಲ್ಲಿ ಬೆರೆದು ಅವಿರಳನಾದವಂಗೆ

ಬಂಧ ಮೋಕ್ಷ ಕರ್ಮಂಗಳ ಬೆಂಬಳಿಗೆ ಸಲ್ಲ!

ಅದು ನಿರಂಗವಸ್ತು.

ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,

ಮಾತುಳಂಗ ಮಧುಕೇಶ್ವರನು.

-ದಾಸೋಹದ ಸಂಗಣ್ಣ

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST