ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಅರಿವುಸಂಬಂಧವುಳ್ಳ ಪರಿಪೂರ್ಣಜ್ಞಾನಿಗಳ
ಅಡಿಗಳಿಗೆ ನಾನೆರಗುವೆನಯ್ಯಾ.
ಎಡೆದೆರಹಿಲ್ಲದೆ ಮೃಡನ ನೆನೆವವರ
ಅಡಿಗಳಿಗೆ ನಾನೆರಗುವೆನಯ್ಯಾ.
ಕಡುಗಲಿಗಳ ಕಂಡಡೆ ಪರಶಿವನೆಂಬೆನಯ್ಯಾ ;
ಅಮುಗೇಶ್ವರಲಿಂಗವನರಿದ ಘನಮಹಿಮನೆಂಬೆನಯ್ಯಾ.
-ಅಮುಗೆ ರಾಯಮ್ಮ