-ಆದಯ್ಯ ಅವರ ವಚನ.!
ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಕಣ್ಣು ತನ್ನ ತಾ ಕಾಣಲರಿಯದಂತೆ,
ಹಣ್ಣು ತನ್ನ ರುಚಿಯ ತಾನರಿಯದಂತೆ,
ಉರಿ ತನ್ನ ಉಷ್ಣವ ತಾನರಿಯದಂತೆ,
ಬಯಲು ತನ್ನ ತೆರಪ ತಾನರಿಯದಂತೆ,
ಲಿಂಗೈಕ್ಯ ತನ್ನೊಳಗಳ ಲಿಂಗವ ತಾನರಿಯದಂತೆ,
ನಾ ಸತ್ತನೆಂಬ ಹೆಣನಿಲ್ಲವಾಗಿ.
ತನ್ನ ಮರೆದು ಲಿಂಗವ [ಮೆ]ರೆದ ಲಿಂಗೈಕ್ಯರು
ಸೌರಾಷ್ಟ್ರ ಸೋಮೇಶ್ವರನಲ್ಲಿ, ಅನುಭಾವವ ಮಾಡಲಿಲ್ಲ;ನುಡಿದು ಹೇಳಲಿಲ್ಲ; ನಡೆದು ತೋರಲಿಲ್ಲ.
-ಆದಯ್ಯ