LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಪಿಎಚ್‌ಡಿ ಅರ್ಹತೆ ಕುರಿತು ಗೊಂದಲ: 452 ಅತಿಥಿ ಉಪನ್ಯಾಸಕರಿಗೆ ನೋಟಿಸ್.!

 

 

ಬೆಂಗಳೂರು: ಪಿಎಚ್ಡಿ ಅರ್ಹತೆ ಕುರಿತು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2025 -26 ನೇ ಸಾಲಿನಲ್ಲಿ ನೇಮಕವಾಗಿದ್ದ ಅತಿಥಿ ಉಪನ್ಯಾಸಕರಿಗೆ ನೋಟಿಸ್ ನೀಡಲಾಗಿದೆ.

ಪಿಎಚ್ಡಿ ಅರ್ಹತೆ ಕುರಿತಂತೆ ಪರಿಶೀಲನೆ ನಡೆಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ. ಯುಜಿಸಿ ನಿಗದಿಪಡಿಸಿದ ಪಿಎಚ್ಡಿ ವಿದ್ಯಾರ್ಹತೆ ಕುರಿತು ಸತ್ಯಾಸತ್ಯತೆ ಪರಿಶೀಲನೆಗೆ ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಪಿಎಚ್ಡಿ ವಿದ್ಯಾರ್ಹತೆ ವಿವರಗಳ ಮಾಹಿತಿಯಲ್ಲಿ ಗೊಂದಲ ಸೃಷ್ಟಿಸಿದ ವಿವಿಧ ಕಾಲೇಜುಗಳ 452 ಅತಿಥಿ ಉಪನ್ಯಾಸಕರಿಗೆ ನೋಟಿಸ್ ನೀಡಲಾಗಿದೆ.

2025 -26ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳು ಪಿಎಚ್ಡಿ ಅರ್ಹತೆ ವಿದ್ಯಾರ್ಹತೆ ಹೊಂದಿರುವುದಾಗಿ ಅರ್ಜಿಯಲ್ಲಿ ನಮೂದಿಸಿದ್ದಾರೆ. ನಂತರ ವಿವಿಧ ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಗೆ ಸೇರ್ಪಡೆಯಾಗಿದ್ದಾರೆ. ಈಗ 2026 -27ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿ ವೇಳೆ ಆನ್ಲೈನ್ ಮೂಲಕ ಅರ್ಜಿ ಪರಿಶೀಲಿಸಿದಾಗ ಪಿಎಚ್ಡಿ ವಿದ್ಯಾರ್ಹತೆ ಕ್ಲೇಮ್ ಮಾಡದೇ ಇರುವುದು ಕಂಡು ಬಂದಿದೆ.

ಹಿನ್ನೆಲೆಯಲ್ಲಿ ಪಿಎಚ್ಡಿ ಅರ್ಹತೆ ಬಗ್ಗೆ ಸೂಕ್ತ ದಾಖಲೆ ಒದಗಿಸುವಂತೆ ತಿಳಿಸಲಾಗಿದೆ. ನೋಟಿಸ್ ನೀಡಿದ ಅತಿಥಿ ಉಪನ್ಯಾಸಕರಲ್ಲಿ ಹೆಚ್ಚಿನವರು ಉತ್ತರ ಕರ್ನಾಟಕದ ಕಲಬುರಗಿ, ಜಮಖಂಡಿ, ಸೇಡಂ, ಯಾದಗಿರಿ, ಬೀದರ್, ಹುಬ್ಬಳ್ಳಿ, ರಾಯಚೂರು, ಅಥಣಿಗೆ ಸೇರಿದವರಾಗಿದ್ದಾರೆ. ಉಳಿದಂತೆ ಬೆಂಗಳೂರು ಪೂರ್ವ, ವಿಜಯನಗರ, ಯಲಹಂಕ ಸೇರಿ ಕೆಲವು ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನೋಟಿಸ್ ನೀಡಲಾಗಿದ್ದು, ನೋಟಿಸ್ ತಲುಪಿದ ಏಳು ದಿನಗಳ ಒಳಗೆ ಲಿಖಿತ ಹೇಳಿಕೆ ವಿವರಣೆ ಪಡೆದುಕೊಳ್ಳಲು ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಎಲ್ಲಾ ಕೆಲಸ ಕಾರ್ಯಗಳು ದರಿದ್ರ ಯೋಗದಿಂದ ಶತ್ರುಗಳ ಬಾಧೆಯಿಂದ ದೃಷ್ಟಿಯಿಂದ ಅಡೆತಡೆಯಾಗುತ್ತಿದ್ದರೆ ಕೆಂಪು ಮೆಣಸಿನಕಾಯಿ ಇಂದ ಈ ಸರಳ ತಂತ್ರ ಮಾಡಿ!ಮತ್ತೆ ಶುರುವಯಿತು ನಗರದ ಮುಖ್ಯ ರಸ್ತೆ ಅಗಲೀಕರಣ ಕಟ್ಟಡ ಪರಿಹಾರ: ಸಚಿವ ಟಿ. ರಘುಮೂರ್ತಿಗ್ರಾಮೀಣ ಭಾಗದ ಯುವಕ ಯುವತಿಯರಿಗಾಗಿ ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ-ಅಕ್ಕಮಹಾದೇವಿ ಅವರ ವಚನ.!ಈ ಒಂದು ವಸ್ತುವನ್ನು ನಿಮ್ಮ ದಿಂಬಿನ ಕೆಳಗಡೆ ಇಟ್ಟು ಮಲಗಿದರೆ ಸಾಕು ಯಾರು ನಮ್ಮಿಂದ ದೂರವಾಗಿರುತ್ತಾರೋ ಅವರು ವಶ ಆಗುತ್ತಾರೆ.ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 15-09-2026ಗೌರಿ ಗಣೇಶ ಹಬ್ಬದ ದಿನವೇ ಅಗ್ನಿ ಅವಘಡನಾಲ್ವರು ಸಜೀವ ದಹನ..!ಪಿಎಚ್‌ಡಿ ಅರ್ಹತೆ ಕುರಿತು ಗೊಂದಲ: 452 ಅತಿಥಿ ಉಪನ್ಯಾಸಕರಿಗೆ ನೋಟಿಸ್.!-ಆಯ್ದಕ್ಕಿ ಮಾರಯ್ಯ ಅವರ ವಚನ.!ಬಯಲುಸೀಮೆಯಲ್ಲಿ ಜಲಕ್ರಾಂತಿಗೆ ಮುನ್ನುಡಿ : ಭೋವಿ ಶ್ರೀ ಅಭಿಮತ .! ಲಕ್ಷ ಮಂದಿಗೆ ಸಿಹಿ ಹಂಚಿಕೆಗೆ ಚಾಲನೆ.!