LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಯೋಗದ ಮೂಲಕ ವಿಶ್ವವನ್ನೇ ಬೆಳಗಿದ ಕನ್ನಡಿಗನಿಗೆ ಅಂತಾರಾಷ್ಟ್ರೀಯ ಗೌರವ.!

ಯೋಗದ ಮೂಲಕ ವಿಶ್ವವನ್ನೇ ಬೆಳಗಿದ ಕನ್ನಡಿಗನಿಗೆ ಅಂತಾರಾಷ್ಟ್ರೀಯ ಗೌರವ.!

ಯೋಗದ ಮೂಲಕ ವಿಶ್ವವನ್ನೇ ಬೆಳಗಿದ ಕನ್ನಡಿಗನಿಗೆ ಅಂತಾರಾಷ್ಟ್ರೀಯ ಗೌರವ.!

ದಾವಣಗೆರೆ : ಕರ್ನಾಟಕದ ಹೆಮ್ಮೆಯ ಪುತ್ರ, ಯೋಗ ಕ್ಷೇತ್ರದ ದಿಗ್ಗಜ ಕೆ. ಜೈಮುನಿ ಅವರ ಸಾಧನೆಗೆ ಇದೀಗ ಅಂತಾ ರಾಷ್ಟ್ರೀಯ ಮನ್ನಣೆ ದೊರೆತಿದೆ. ಎಸ್ಟೋನಿಯಾದ ಪ್ರತಿಷ್ಠಿತ ಯೂರೋ ಏಷ್ಯನ್ ಯುನಿ ವರ್ಸಿಟಿ ವತಿಯಿಂದ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುತ್ತಿದೆ.

ಈ ಸ್ಮರಣೀಯ ಸಮಾರಂಭವು ದಿನಾಂಕ 28 ನವೆಂಬರ್, ಶನಿವಾರದಂದು ರೆಗೆಂಝ ಬೈ ತುಂಗಾ ವಂಶಿ, ನವಿ ಮುಂಬೈ(Regenza by Tunga,  Vashi, Navi Mumbai)ನಲ್ಲಿ ನಡೆಯಲಿದೆ. ಬಾಲಿವುಡ್‌ನ ಖ್ಯಾತ ನಟಿ ಸುಧಾ ಚಂದ್ರನ್ ಅವರು ಈ ಗೌರವ ಪದವಿಯನ್ನು ಪ್ರಧಾನ ಮಾಡಲಿದ್ದಾರೆ.

40 ವರ್ಷಗಳ ತಪಸ್ಸಿಗೆ ಸಂದ ಗೌರವ : ಸುಮಾರು 40 ವರ್ಷಗಳಿಂದ ಯೋಗಾಸನ ಸಾಧನೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಜೈಮುನಿ ಅವರು, ಯೋಗವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದಾರೆ. ಸ್ವರ್ಣ ಪದಕ, ಬೆಳ್ಳಿ ಪದಕ ಹಾಗೂ ಕಂಚಿನ ಪದಕಗಳನ್ನು ಪಡೆಯುವ ಮೂಲಕ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಮಾಸ್ ಗಿನ್ನಿಸ್ ರೆಕಾರ್ಡ್, ಗ್ಲೋಬಲ್ ರೆಕಾರ್ಡ್, ನೋಬೆಲ್ ಯೋಗ ರೆಕಾರ್ಡ್ ಗಳಂತಹ ಪ್ರತಿಷ್ಠಿತ ದಾಖಲೆಗಳು ಅವರ ಕಿರೀಟಕ್ಕೆ ಮತ್ತಷ್ಟು ಮೆರುಗು ನೀಡಿವೆ. ಸಿಂಗಾಪುರ್, ಥೈಲ್ಯಾಂಡ್, ಮಲೇಷ್ಯಾ, ಶ್ರೀಲಂಕಾ, ನೇಪಾಳ ಸೇರಿದಂತೆ ಹಲವಾರು ದೇಶಗಳಲ್ಲಿ ತಮ್ಮ ಅದ್ಭುತ ಯೋಗಾಸನ ಪ್ರದರ್ಶನಗಳನ್ನು ನೀಡಿ ಸ್ವರ್ಣ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಯೋಗ ಮಾತ್ರವಲ್ಲದೆ, ಪತ್ರಿಕೋದ್ಯಮದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಇವರು, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಕ್ರೀಡಾ ರತ್ನ ಪ್ರಶಸ್ತಿ ಗಳಿಗೆ ಭಾಜನರಾಗಿದ್ದಾರೆ.

ಇದಲ್ಲದೆ ಸಾಂಸ್ಕೃತಿಕ ಚಟುವಟಿಕೆಗಳು, ಗಡಿ ಭದ್ರತಾ ಪಡೆ ಹಾಗೂ ಸಾಮಾಜಿಕ ಸೇವೆಯಲ್ಲಿ ಅಳಿಲು ಸೇವೆ ಸಲ್ಲಿಸುತ್ತಾ ಬಂದಿರುವ ಇವರ ಬಹುಮುಖಿ ಸಾಧನೆಯನ್ನು ಗುರುತಿಸಿ , ಯೂರೋ ಏಷ್ಯನ್ ಯುನಿವರ್ಸಿಟಿಯವರು ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಿದ್ದಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST