LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಜೋಗ ಜಲಪಾತಕ್ಕೆ ಕೆಎಸ್‍ಆರ್‍ಟಿಸಿ ವಿಶೇಷ ಪ್ಯಾಕೇಜ್ ಬಸ್

ಜೋಗ ಜಲಪಾತಕ್ಕೆ ಕೆಎಸ್‍ಆರ್‍ಟಿಸಿ ವಿಶೇಷ ಪ್ಯಾಕೇಜ್ ಬಸ್

 

ಚಿತ್ರದುರ್ಗ: ಮಳೆಗಾಲದ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿತ್ರದುರ್ಗ ವಿಭಾಗವು ಪ್ರತಿ ಭಾನುವಾರ ವಿಶೇಷ ಪ್ರವಾಸ ಪ್ಯಾಕೇಜ್ ಬಸ್ ಸೇವೆಯನ್ನು ಆರಂಭಿಸುತ್ತಿದೆ.

ಈ ವಿಶೇಷ ಬಸ್ ಸೇವೆಯು ಇದೇ ಆಗಸ್ಟ್ 09 ರಿಂದ ಪ್ರಾರಂಭವಾಗಲಿದ್ದು, ಚಳ್ಳಕೆರೆ, ಚಿತ್ರದುರ್ಗ ಹಾಗೂ ಹೊಳಲ್ಕೆರೆ ಬಸ್ ನಿಲ್ದಾಣಗಳಿಂದ ಹೊರಡಲಿದೆ. ಈ ಪ್ಯಾಕೇಜ್‍ನಲ್ಲಿ ಪ್ರವಾಸಿಗರು ಜೋಗ ಜಲಪಾತದ ಜೊತೆಗೆ ವರದಮೂಲ ಮತ್ತು ಇಕ್ಕೇರಿ ತಾಣಗಳನ್ನು ವೀಕ್ಷಿಸಬಹುದಾಗಿದೆ. ಈ ಬಸ್‍ಗಳು ಚನ್ನಗಿರಿ, ಶಿವಮೊಗ್ಗ ಹಾಗೂ ಸಾಗರ ಮಾರ್ಗವಾಗಿ ಸಂಚರಿಸಲಿವೆ.

ಚಳ್ಳಕೆರೆಯಿಂದ ಬೆಳಿಗ್ಗೆ 5.15ಕ್ಕೆ ಹೊರಡುವ ಬಸ್ ಮಧ್ಯಾಹ್ನ 1.45ಕ್ಕೆ ಜೋಗ ತಲುಪಲಿದ್ದು, ಟಿಕೆಟ್ ದರ ವಯಸ್ಕರಿಗೆ ರೂ.600 ಹಾಗೂ ಮಕ್ಕಳಿಗೆ ರೂ.500 ನಿಗದಿಪಡಿಸಲಾಗಿದೆ. ಚಿತ್ರದುರ್ಗದಿಂದ ಬೆಳಿಗ್ಗೆ 6 ಗಂಟೆಗೆ ಹೊರಡುವ ಬಸ್ ಮಧ್ಯಾಹ್ನ 1.45ಕ್ಕೆ ತಲುಪಲಿದ್ದು, ವಯಸ್ಕರಿಗೆ ರೂ.500 ಮತ್ತು ಮಕ್ಕಳಿಗೆ ರೂ. 400 ದರವಿದೆ. ಹಾಗೆಯೇ ಹೊಳಲ್ಕೆರೆಯಿಂದ ಬೆಳಿಗ್ಗೆ 6.45ಕ್ಕೆ ಹೊರಡುವ ಬಸ್ ಮಧ್ಯಾಹ್ನ 1.45ಕ್ಕೆ ಜೋಗ ತಲುಪಲಿದ್ದು, ವಯಸ್ಕರಿಗೆ ರೂ.450 ಹಾಗೂ ಮಕ್ಕಳಿಗೆ ರೂ.350 ಪ್ರಯಾಣ ದರ ನಿಗದಿ ಮಾಡಲಾಗಿದೆ.

ಈ ವಿಶೇಷ ಟೂರ್ ಪ್ಯಾಕೇಜ್‍ಗೆ www.ksrtc.in  ವೆಬ್‍ಸೈಟ್ ಮೂಲಕ ಆನ್‍ಲೈನ್ ಬುಕಿಂಗ್ ಮಾಡಬಹುದು. ಒಂದು ವೇಳೆ ಆಸನಗಳು ಖಾಲಿ ಇದ್ದಲ್ಲಿ ಬಸ್‍ನ ನಿರ್ವಾಹಕರ ಬಳಿಯೂ ನೇರವಾಗಿ ಟಿಕೆಟ್ ಪಡೆಯಬಹುದಾಗಿದೆ. ಈ ವಿಶೇಷ ಪ್ಯಾಕೇಜ್‍ಗೆ ‘ಶಕ್ತಿ' ಯೋಜನೆ ಅನ್ವಯಿಸುವುದಿಲ್ಲ ಎಂದು ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದೇಶಿ ಕಂಪನಿಗಳನ್ನು ದೇಶದಿಂದ ಒದ್ದೊಡಿಸುವ ಚಳುವಳಿ: ಜೆ.ಯಾದವರೆಡ್ಡಿಮಾಯಕೊಂಡ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೊದಲ ಆದ್ಯತೆ: ಸಚಿವ ಕೆ.ಎಸ್. ಬಸವಂತಪ್ಪದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 09-08-2026ಶತ್ರುಗಳು ಕೂಡ ನಿಮ್ಮ ಮಾತು ಕೇಳಿ ನಿಮಗೆ ಶರಣಾಗತಿ ಆಗಬೇಕೆಂದರೆ ಈ ತಂತ್ರ ಶಕ್ತಿ ಇರುವ ವಸ್ತುವನ್ನು ನಿಮ್ಮತ್ರ ಇಟ್ಟುಕೊಳ್ಳಿ?-ಕನ್ನಡಿಕಾಯಕದ ಅಮ್ಮಿದೇವಯ್ಯ ಅವರ ವಚನಮಂತ್ರ ಶಾಸ್ತ್ರದಿಂದ ವಶೀಕರಣ ಮಾಡುವ ತಂತ್ರ ಇದೆ ನೀವು ಇಷ್ಟ ಪಟ್ಟಂತವರು ಮಂತ್ರ ಉಚ್ಚಾರಣೆಯಿಂದ ನಿಮ್ಮಂತೆ ಆಗುತ್ತಾರೆ!ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ: ಶಾಲೆ, ಪಿಯು ಕಾಲೇಜುಗಳಿಗೆ ರಜೆಜೋಗ ಜಲಪಾತಕ್ಕೆ ಕೆಎಸ್‍ಆರ್‍ಟಿಸಿ ವಿಶೇಷ ಪ್ಯಾಕೇಜ್ ಬಸ್ವಕೀಲರಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ..!08-08-2026 ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ