ರೈತ ವಿರೋಧಿ ಕಾನೂನುಗಳನ್ನು ರಚನೆ ಮಾಡಿ ರೈತರ ಶಕ್ತಿಯನ್ನು ಕುಂದಿಸಿವೆ…!
ಚಿತ್ರದುರ್ಗ : ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ರಚನೆ ಮಾಡಿ ರೈತರ ಶಕ್ತಿಯನ್ನು ಕುಂದಿಸಿವೆ. ನಾವು ಇವುಗಳ ಬಗ್ಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಮುಂದೆ ನಡೆಯಲಿರುವ ಹಿರಿಯೂರು ಉಪ ಚುನಾ ವಣೆಗೆ ನಮ್ಮ ರೈತ ಸಂಘದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದೇವೆ ಹಾಗೆಯೇ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗೂ ಹೋಗಿ ಸಂಘಟನೆ ಮಾಡಲಿದ್ದೇವೆ. ಎಂದು ರೈತ ಸಂಘದ ಸಲಹಾ ಸಮಿತಿ ಸದಸ್ಯರು ರೆಡ್ಡಿಹಳ್ಳಿ ವೀರಣ್ಣ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯ ಸಕಲ ಸಂಪತ್ತನ್ನು ಹೊಂದಿರುವಂತಹ ರಾಜ್ಯ. ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ.ನೀರು ಸೇರಿದಂತೆ ಪ್ರಕೃತಿ ಸಂಪತ್ತು ಹೇರಳವಾಗಿದೆ.ಆದರೆ ನೀರನ್ನು ಸರಿಯಾಗಿ ಹಂಚಿಕೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ನಿಲ್ಲಬೇಕು.. ಸ್ವಾಮಿನಾಥನ್ ವರದಿ ಜಾರಿಯಾಗಬೇಕು.ಎಂದ ಅವರು, ಸರ್ಕಾರಗಳು ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿವೆ. ರಾಜ್ಯದಲ್ಲಿ ಈಗಾಗಲೇ ಮೂರು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಬಗ್ಗೆ ಯಾವುದೇ ಚರ್ಚೆ ಕೂಡ ಮಾಡಿಲ್ಲ. ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಬಹಳಷ್ಟು ರೈತರು ಕೃಷಿ ಬಿಟ್ಟು ಹೊರ ಹೋಗುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ 4 ರೈತ ಸಂಘಟನೆಗಳು ವಿಭಜನೆಯಾಗಿದ್ದವು ಅವುಗಳು ಈಗ ಒಂದಾಗಿ ಹಿರಿಯೂರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿದ್ದೇವೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ನಾವು ಸ್ಪರ್ಧೆ ಮಾಡಲಿದ್ದು ಈಗಿನ ಸರ್ಕಾರಗಳನ್ನು ಕಿತ್ತು ಮೂಲೆಗೆ ಎಸೆಯಲಿದ್ದೇವೆ.
ಜಿಲ್ಲಾಧ್ಯಕ್ಷ ಕೆ.ಟಿ ತಿಪ್ಪೇಸ್ವಾಮಿ ಮಾತನಾಡಿ, ತುಂಗಾದಿಂದ 17.4 ಟಿಎಂಸಿ ನೀರನ್ನು ಭದ್ರಕ್ಕೆ ಪÀಂಪ್ ಮಾಡಿದ್ದರೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ.ಕೇಂದ್ರ ಸರ್ಕಾರ ಘೋಷಣೆ ಮಾಡಿದಂತ 5,300 ಕೋಟಿ ರೂಗಳನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ.ಇದನ್ನು ಖಂಡಿಸಿ ದಿನಾಂಕ:23.11.2026ರಂದು ಸಂಸದರ ಕಛೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಂಡಿರುತ್ತೇವೆ. ದಿನಾಂಕ: 21.11.2026ರಂದು ಮುಖ್ಯಮಂತ್ರಿಗಳು ಹಿರಿಯೂರಿಗೆ ಆಗಮಿಸುತ್ತಿದ್ದು ಅವರು ಬರುವ ಮೊದಲು ರೈತರ ಖಾತೆಗೆ ಬೆಳೆವಿಮೆ ಹಣವನ್ನು ಜಮಾವಣೆ ಮಾಡಿ ಬರಬೇಕು ಇಲ್ಲವಾದಲ್ಲಿ ಅವರು ಬಂದ ಸಂದರ್ಭದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಸಿದರು.
ಗೋಷ್ಟಿಯಲ್ಲಿ ಕಬ್ಬಿಗೇರೆ ನಾಗರಾಜು, ಕೆ.ಟಿ.ತಿಪ್ಪೇಸ್ವಾಮಿ, ನಿಜಲಿಂಗಪ್ಪ, ಮಲ್ಲಿಕಾರ್ಜನ್ ಡಿಎಸ್.ಹಳ್ಳಿ, ಮಲ್ಲಿಕಾರ್ಜನ್ ಸೇರಿದಂತೆ ರೈತ ಮುಖಂಡರು ಭಾಗವಹಿಸಿದ್ದರು.