ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ದ್ವೈತಾದ್ವೈತಂಗಳೆಂದು ಸಂಬಂಧಿಸಿ ನುಡಿವಲ್ಲಿ,
ದ್ವೈತವೆರಡು ಅದ್ವೈತ ಒಂದೆ, ದ್ವೈತ ಉಂಟು ಅದ್ವೈತವಿಲ್ಲ.
ಅದು ಒಂದರಲ್ಲಿ ಹುಟ್ಟಿ ಕುರುಹಿಡುವನ್ನಕ್ಕರ,
ಸಿದ್ಧಾಂತವಲ್ಲ, ಪ್ರಸಿದ್ಧಾಂತವಲ್ಲ.
ಅದ ನಿನ್ನ ನೀ ತಿಳಿ, ಅದು ನಿನಗನ್ಯಭಿನ್ನವಲ್ಲ.ಗೋಳಕಾಕಾರ ವಿಶ್ವವಿರಹಿತಲಿಂಗವು ತಾನು ತಾನೆ.
-ಸಿದ್ಧಾಂತಿ ವೀರಸಂಗಯ್ಯ