LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ವಚನ:  -ಹಡಪದ ಅಪ್ಪಣ್ಣ

ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು   ನಿಮ್ಮಗಳ ಅವಗಾಹನೆಗೆ  

ವಚನ:

ರಾಗ ರಚನೆಯ ಬಲ್ಲೆನೆಂಬ ವ್ಯಂಗಿಮನುಜರಿರಾ, ನೀವು ಕೇಳಿ :

ರಾಗವಾವುದು, ರಚನೆಯಾವುದು ಬಲ್ಲರೆ ನೀವು ಹೇಳಿರೊ,

ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ.

ಈ ರಾಗದ್ವೇಷವ ಹಿಡಿದು, ಕೂಗಿಡುವುದೆಲ್ಲವು ರಾಗವೆ?

ವೇದಪುರಾಣಾಗಮಶಾಸ್ತ್ರವನೋದಿ ಕಂಡವರ ಬೋಧಿಸುವದೆಲ್ಲ ರಚನೆಯೆ? ಅಲ್ಲ.

ಇನ್ನು ರಾಗವಾವುದು ಎಂದರೆ,

ಝೇಂಕಾರದ ಪ್ರಣಮದ ನಾದವನರಿಯಬಲ್ಲರೆ ರಾಗ.

ಇನ್ನು ರಚನೆ ಯಾವುದು ಎಂದರೆ,

ಯೋಗಿ, ಜೋಗಿ, ಶ್ರವಣ, ಸನ್ಯಾಸಿ, ಕಾಳಾಮುಖಿ, ಪಾಶುಪತ ಷಡುದರ್ಶನಕ್ಕೆ

ಶ್ರುತವ ತೋರಿ ನುಡಿದು, ದೃಷ್ಟವ ತೋರಿ ನಡೆದು,

ಅಲ್ಲದಿರ್ದರೆ ನೀತಿಯ ತೋರಿ ಮರೆವುದೀಗ ರಚನೆ.

ಇದನರಿಯದೆ ನಾನು ರಾಗ ರಚನೆಯ ಬಲ್ಲೆನೆಂದು ನುಡಿವ

ಮೂಗುಹೋದ ಮೂಕೊರೆಯರ ಮೆಚ್ಚುವನೆ,ನಮ್ಮ ಬಸಪ್ರಿಯ ಕೂಡಲಚೆನ್ನಬಸವಣ್ಣ ?

 

-ಹಡಪದ ಅಪ್ಪಣ್ಣ

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಬಿಎಸ್ ಬ್ಯಾಂಕಿನಲ್ಲಿ ಭಾರಿ ಗೋಲ್ ಮಾಲ್.! ನಕಲಿ ಚಿನ್ನಾಭರಣಗಳ ಅಡವಿಟ್ಟು ಲಕ್ಷ ಲಕ್ಷರೂಗಳು ಗಾಯಬ್.!ಅ.27 ಮತ್ತು 28ರಂದು ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಇನ್ಮುಂದೆ ಡ್ರೈವಿಂಗ್ ಲೈಸೆನ್ಸ್‌ ಗೆ ಹೊಸ ನಿಯಮ ಅಪ್ಲೆ..!ಮದುವೆಯಾದ ಪುರುಷರು ಪರ ಸ್ತ್ರೀಯರ ಮೇಲೆ ವ್ಯಾಮೋಹ ಹೊಂದಲು ಅಕ್ರಮ ಸಂಬಂಧಗಳ ಸುಳಿಯಲ್ಲಿ ಸಿಲುಕಲು  ಕಾರಣವೇನು ತಿಳಿಯಿರಿ!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 23-10-2026ವಚನ.: --ಹಡಪದ ಅಪ್ಪಣ್ಣ ..!ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 22-10-2026ದಸರಾ ಹಬ್ಬ ಹಿನ್ನೆಲೆ: ಇಂದು ಈ ಶಾಲೆಗಳಿಗೆ ರಜೆ ಘೋಷಣೆ..!ಕೃತಕ ಬುದ್ಧಿಮತ್ತೆ ಬಳಸಿ ವಿಧಾನಸೌಧ ಸ್ಫೋಟಿಸಿದ ದೃಶ್ಯ ಮಾಡಿದ್ದ ವ್ಯಕ್ತಿ ಬಂಧನ.!