ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಅಡವಿಯ ಹುಲ್ಲ ಮೇದ ಪಶು
ಮಡುವಿನಗ್ಛವಣಿಯ ಕುಡಿದು ನಡುಬೀದಿಯಲ್ಲಿ ಬರುತ್ತಿರಲು,
ಕಡೆಯಲಿರ್ದ ಹುಲಿ ಬಂದು ಹಿಡಿಯಲು,
'ನಿನ್ನೊಡವೆಯನೇನ ಬಳಸಿಕೊಂಡೆನೋ' ಎಂದು
ತನ್ನೊಡೆಯನ ಕರೆಯಲು,
ಹಿಡಿದ ಹುಲಿ ಬಿಟ್ಟೋಡಿತ್ತು ನೋಡಾ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
-ತೋಂಟದ ಸಿದ್ಧಲಿಂಗ ಶಿವಯೋಗಿಗಳು