ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು ನಿಮ್ಮಗಳ ಅವಗಾಹನೆಗೆ
ವಚನ:
ಭಕ್ತಂಗೊಂದೆ ವಾಕ್ಯಸ ಬಾಳೆಗೊಂದೆ ಫಲ.
ವಿರಕ್ತ ಬಿಟ್ಟುದ ಹಿಡಿದಲ್ಲಿ ಮತ್ತೆ ಮುಟ್ಟಿದಡೆ ಸತ್ತನಾಯ ಹಡುಹು.
ಮತ್ತೆ ಸತ್ಕ್ರಿಯೆಯಲ್ಲಿ ನಡೆವವ ತನ್ನ ನಿತ್ಯನೇಮವ ತಪ್ಪಿ,
ಕೆಟ್ಟು ನಡೆದು, ಮತ್ತೆ ದ್ರವ್ಯವ ಕೊಟ್ಟು,
ಭಕ್ತರೊಡೆಯರಲ್ಲಿ ತಪ್ಪ ಪರಿಹರಿಸಿಕೊಂಡಿಹೆನೆಂದು
ಬಹಮಿಟ್ಟೆಯ ಭಂಡರ ಕಂಡಡೆ,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವಾಯಿತ್ತಾದಡೂ ಒಡಗೂಡಲೊಲ್ಲೆ.
-ವೈದ್ಯ ಸಂಗಣ್ಣ