LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ವೋಟ್ ಬಚಾವೋ ದೇಶ ಬಚಾವೋ ಅಭಿಯಾನ ದೀಪ್ತಿ ಮೇರಿ ವರ್ಗಿಸ್.!

ವೋಟ್ ಬಚಾವೋ ದೇಶ ಬಚಾವೋ ಅಭಿಯಾನ ದೀಪ್ತಿ ಮೇರಿ ವರ್ಗಿಸ್.!

 

ಚಿತ್ರದುರ್ಗ : ದೆಹಲಿಯಲ್ಲಿ ನ.1 ರಂದು ಕಾಂಗ್ರೆಸ್ನಿಂದ ವೋಟ್ ಬಚಾವೋ ದೇಶ ಬಚಾವೋ ಅಭಿಯಾನ ಬೃಹತ್ ರ್ಯಾಲಿ ಆರಂಭಗೊಂಡ ನಂತರ ರಾಜ್ಯದಲ್ಲಿ ಅಭಿಯಾನ ನಡೆಯಲಿದೆ ಎಂದು ಎಐಸಿಸಿ.ಯಿಂದ ಕರ್ನಾಟಕದ ಉಸ್ತುವಾರಿಯಾಗಿ ನೇಮಕಗೊಂಡಿರುವ ದೀಪ್ತಿ ಮೇರಿ ವರ್ಗಿಸ್ ತಿಳಿಸಿದರು.

ಪ್ರಥಮ ಬಾರಿಗೆ ಭಾನುವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಜಿಲ್ಲಾ ತಾಲ್ಲೂಕು ವಾರ್ಡ್ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿಯಾನವನ್ನು ಕೊಂಡೊಯ್ದು ಎಸ್ಐಆರ್.ಮೂಲಕ ಕೋಮುವಾದಿ ಬಿಜೆಪಿ.ಯವರು ನೈಜ ಮತದಾರರನ್ನು ಮತಪಟ್ಟಿಯಿಂದ ಡಿಲಿಟ್ ಮಾಡಿಸುತ್ತಿರುವುದರ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ಕಾರ್ಯಕರ್ತರು, ಮುಖಂಡರು ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಮೇಲಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳ, ಕರ್ನಾಟಕ, ಮಹಾರಾಷ್ಟದಲ್ಲಿ ಕೋಟಿಗಟ್ಟಲೆ ಮತದಾರರನ್ನು ಮತಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದರಿಂದ ಸಂವಿಧಾನದಡಿ ಸಿಕ್ಕಿರುವ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಕಾಂಗ್ರೆಸ್ನಿಂದ ಮತದಾನದ ಹಕ್ಕು ಸಿಕ್ಕಿದೆ. ಅದನ್ನು ಕೇಂದ್ರ ಬಿಜೆಪಿ.ಯವರು ಮತಪಟ್ಟಿಯಿಂದ ತೆಗೆದು ಹಾಕುವ ಹುನ್ನಾರ ನಡೆಸಿರುವುದನ್ನು ಎಲ್ಲರೂ ಪ್ರಶ್ನಿಸಬೇಕಿದೆ ಎಂದು ಎಚ್ಚರಿಸಿದರು.

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ಕುಮಾರ್ಗೆ ದೇಶದ ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್ಷಾ ಹಾಗೂ ಬಿಜೆಪಿ. ಮುಖಂಡರುಗಳು ಕುಮ್ಮಕ್ಕು ನೀಡುತ್ತಿರುವುದರ ವಿರುದ್ದ ಮೊದಲು ಹೋರಾಟ ಕೈಗೊಂಡವರು ರಾಹುಲ್ಗಾಂಧಿ. ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತವೆ. ಆಗ ನಿಜವಾದ ಮತದಾರರು ಮತದಾನದಿಂದ ವಂಚಿತರಾದರೆ ಸಂವಿಧಾನ ನೀಡಿರುವ ಹಕ್ಕಿಗೆ ಬೆಲೆಯಿಲ್ಲದಂತಾಗುತ್ತದೆ. ಹಾಗಾಗಿ ವೋಟ್ ಬಚಾವೋ ದೇಶ್ ಬಚಾವೋ ಬೃಹತ್ ರ್ಯಾಲಿ ಅಭಿಯಾನವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ ಎಂದರು.

ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷರುಗಳಾದ ನಜ್ಮತಾಜ್, ಎಸ್.ಎನ್.ರವಿಕುಮಾರ್, ಪರಿಶಿಷ್ಟ ವರ್ಗಗಳ ವಿಭಾಗದ ಅಧ್ಯಕ್ಷ ಮಂಜುನಾಥ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಜಿಲ್ಲೆಯ ನಾಲ್ಕು ಕ್ಷೇತ್ರಗಳ ಉಸ್ತುವಾರಿಗಳಾದ ಅಮೃತೇಶ್ವರಸ್ವಾಮಿ, ರಾಮಕೃಷ್ಣಪ್ಪ, ನಿಖಿತ್ರಾಜ್ಮೌರ್ಯ, ಬಿ.ಯೋಗೇಶ್ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾನಂದಿನಿಗೌಡ, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ನಿಕಟಪೂರ್ವ ಅಧ್ಯಕ್ಷ ಹೆಚ್.ಅಂಜಿನಪ್ಪ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಾರೆಹಳ್ಳಿ ಉಲ್ಲಾಸ್, ನಗರಸಭೆ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರುಗಳು, ಕಾಂಗ್ರೆಸ್ನ ವಿವಿಧ ಮೋರ್ಚ ಅಧ್ಯಕ್ಷರು, ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

 

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಮ್ಮ ಸಂಗಾತಿ ನಡುವೆ ಶಾಂತಿಭಂಗ ತರುವ `ಮದ್ಯ ಪ್ರೇಮಿ ಉಚ್ಟಾಟಣ ತಂತ್ರ'.!ಜಿಲ್ಲಾ ಪಂಚಾಯಿತಿ –ತಾಲ್ಲೂಕು ಪಂಚಯಿತ ಚುನಾವಣೆ ದಿನಾಂಕ ಫಿಕ್ಸ್ ..!ಕಿತ್ತೂರು ಉತ್ಸವದಲ್ಲಿ CM ಡಿಕೆಶಿ ಮಹತ್ವದ ಘೋಷಣೆ…!ವೋಟ್ ಬಚಾವೋ ದೇಶ ಬಚಾವೋ ಅಭಿಯಾನ ದೀಪ್ತಿ ಮೇರಿ ವರ್ಗಿಸ್.!ವಚನ.: -ಗಜೇಶ ಮಸಣಯ್ಯಹೆಚ್.ಡಿ. ದೇವೇಗೌಡರ ಕುಟುಂಬವನ್ನು ಮುಗಿಸಲು ಹಾಲಿ ಮುಖ್ಯಮಂತ್ರಿ ₹600 ಕೋಟಿ ಡೀಲ್.!ವಾಮಾಚಾರದ ಪ್ರಯೋಗ ಮನೆಗೆ ತಾಗದಂತೆ ತಡೆಯುವುದಕ್ಕೆ ಈ ತಂತ್ರ ಮಾಡಿ.ವಜ್ರಮುಷ್ಠಿ ಕಾಳಗ ರದ್ದರ ಬಗ್ಗೆ ಊಹಾ -ಪೂಹಗಳಿಗೆ  ರಾಜಮಾತೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ಇದು.!ಬಾಬಾಸಾಹೇಬ್ ಅಂಬೇಡ್ಕರ್ ಒಬ್ಬ ಶ್ರೇಷ್ಠ ಸಮಾಜ ಸುಧಾರಕರು: ನ್ಯಾಯಾಮೂರ್ತಿ ಪ್ರಸನ್ನ ಬಾಲಚಂದ್ರ ವರಾಲೆ.!ವಾಯುಭಾರ ಕುಸಿತ ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಮಳೆ