ಅಬುಜಾ :ಆಹಾರ ಮಾರುಕಟ್ಟೆಗೆ ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಉತ್ತರ ನೈಜೀರಿಯಾದ ನಿಗರ್ ನದಿಯಲ್ಲಿ ಮುಳುಗಿ 27 ಜನ ಜಲಸಮಾಧಿಯಾಗಿ, 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾದ ಘಟನೆ ನೈಜೀರಿಯಾದಲ್ಲಿ ನಡೆದಿದೆ.
ಮುಳುಗು ತಜ್ಞರು 27 ಮೃತದೇಹಗಳನ್ನು ಶುಕ್ರವಾರ ಸಂಜೆ ನದಿಯಿಂದ ಹೊರತೆಗೆದಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ. ಘಟನೆ ನಡೆದ 12 ಗಂಟೆ ಬಳಿಕವೂ ಯಾರೂ ಬದುಕಿ ಉಳಿದಿರುವುದು ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭಿಸಿದೆ.