ನವದೆಹಲಿ: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ-ಮುಖ್ಯಮಂತ್ರಿ ನಿತೀಶ್ ಕುಮಾರ್ ‘ಜೋಡಿ’ ಮತ್ತೆ ಕಮಾಲ್ ಮಾಡಿದೆ. ಈ ಜೋಡಿ ಬಿಹಾರದ ಚುನಾವಣೆಯಲ್ಲಿ ಎನ್‌ಡಿಎ ಗೆಲ್ಲಲು ಮೋಡಿ ಮಾಡಿದೆ.
2025ರ ಬಿಹಾರ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ಚುನಾವಣಾ ಆಯೋಗದ ಆರಂಭಿಕ ಪ್ರವೃತ್ತಿಗಳು ಮೈತ್ರಿಕೂಟವು ಒಟ್ಟು 243 ಬಿಹಾರ ವಿಧಾನಸಭಾ ಸ್ಥಾನಗಳಲ್ಲಿ 200ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಬಹುಮತದ ಗಡಿಯನ್ನು ದಾಟುತ್ತಿದೆ ಎಂದು ತೋರಿಸುತ್ತದೆ.
2025ರ ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯದ ಹಂತಕ್ಕೆ ಬಂದಿದೆ. ಬಿಹಾರದಲ್ಲಿ NDA ಮೈತ್ರಿಕೂಟವು ಸ್ಪಷ್ಟವಾಗಿ ಮುಂಚೂಣಿಯಲ್ಲಿದೆ. ಹೀಗಾಗಿ, ಭರ್ಜರಿ ಅಂತರದಿಂದ ಎನ್‌ಡಿಎ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. NDA ಪ್ರಸ್ತುತ 200 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಸರ್ಕಾರ ರಚಿಸಲು 122 ಸ್ಥಾನಗಳ ಅಗತ್ಯವಿದೆ. ಎನ್ಡಿಎಯ ಎರಡು ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ, ಆರ್‌ಜೆಡಿ ಕೇವಲ 27 ಸ್ಥಾನಗಳನ್ನು ಪಡೆದಿದ್ದರೆ ಕಾಂಗ್ರೆಸ್ ಕೇವಲ 6 ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ.
2020ರಲ್ಲಿ ಎನ್‌ಡಿಎ 125 ಸ್ಥಾನಗಳನ್ನು ಗೆದ್ದರೆ, ಮಹಾಘಟಬಂಧನ್ 110 ಸ್ಥಾನಗಳನ್ನು ಗೆದ್ದಿತ್ತು.































