ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಬಳಿಕ ನಿವೇದಿತಾ ಗೌಡ ಪದೇ ಪದೇ ಬಾತ್ರೂಮ್ನಲ್ಲಿಯೇ ರೀಲ್ಸ್ ಮಾಡುವುದು ಹೆಚ್ಚುತ್ತಿದೆ. ಐಷಾರಾಮಿ ಬಂಗಲೆ ಇದ್ದರೂ, ಬಾತ್ರೂಮ್ನಲ್ಲಿಯೇ ನಟಿ ರೀಲ್ಸ್ ಮಾಡ್ತಿರೋದೇ ಅವರ ಅಭಿಮಾನಿಗಳಿಗೆ ಯಕ್ಷ ಪ್ರಶ್ನೆ ಆಗಿತ್ತು.
ಇವತ್ತು ಕೂಡ ನಿವೇದಿತಾ ಮಾಮೂಲಿಯಂತೆ ಹಾಟ್ ಎನ್ನುವಂಥ ಬಟ್ಟೆ ತೊಟ್ಟು ಬಾತ್ರೂಮ್ನಲ್ಲಿಯೇ ರೀಲ್ಸ್ ಮಾಡಿದ್ದಾರೆ. ಆದರೆ ಒಂದು ವಿಶೇಷ ಎಂದರೆ, ಕನ್ನಡ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಹೆಚ್ಚಾಗಿ ಇಂಗ್ಲಿಷ್ ಹಾಡಿಗೆ ಕುಣಿತಿದ್ದ ನಟಿ, ಈಗ ಕನ್ನಡ ಹಾಡಿಗೆ ಸೊಂಟ ಬಳುಕಿಸಿದ್ದಾರೆ.
ಹೃದಯವಿದು ಮೌನ ಚಿತ್ರದ ಹಿಡಿದರೂ ಕುಣಿಯುವ ಹೃದಯವಿದು ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಮಾಮೂಲಿನಂತೆ ಒಂದಿಷ್ಟು ಥಳಕು ಬಳಕಿನ ಸ್ಟೆಪ್ ಹಾಕಿರೋ ನಟಿಗೆ, ಅವ್ರು ಏನು ಮಾಡಿದರೂ ಅದು ವೈರಲ್ ಆಗುತ್ತದೆ ಎನ್ನುವುದು ತಿಳಿದಿದೆ.
ಆದರೆ ಇದೀಗ ಬಾತ್ರೂಮ್ ಸೀಕ್ರೇಟ್ ಅನ್ನು ಅವರ ಫ್ಯಾನ್ಸ್ ರಿವೀಲ್ ಮಾಡಿದ್ದಾರೆ. ಅದೇನೆಂದರೆ, ಬಾತ್ರೂಮ್ನಲ್ಲಿ ರೀಲ್ಸ್ ಮಾಡಿದರೆ ಅದು ಸಕತ್ ಹಿಟ್ ಆಗುತ್ತದೆಯಂತೆ. ಅದಕ್ಕಾಗಿಯೇ ಈಗ ಹಲವು ರೀಲ್ಸ್ ತಾರೆಯರು ಹೆಚ್ಚು ಲೈಕ್ಸ್ ಪಡೆಯುವುದಕ್ಕಾಗಿ ಬಾತ್ರೂಮಿನಲ್ಲಿಯೇ ರೀಲ್ಸ್ ಮಾಡಿ ಹಾಕುತ್ತಿದ್ದಾರೆ ಎನ್ನುವುದು ನೆಟ್ಟಿಗರ ಸಂಶೋಧನೆ.