ಬಿಗ್ಬಾಸ್ ಮನೆಯಿಂದ ಚಂದ್ರಪ್ರಭ ಹೊರಬಿದ್ದಿದ್ದಾರೆ. ಆರು ವಾರಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದ ಚಂದ್ರಪ್ರಭ, ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು, ಇದೀಗ ಬೇಸರದಿಂದ ಮನೆಯಿಂದ ಹೊರಬಂದಿದ್ದಾರೆ.
ಆದರೆ ಅವರು ಬೇರೆಯದ್ದೇ ರೀತಿಯಲ್ಲಿ ಹೊರಕ್ಕೆ ಬಂದಿದ್ದು, ಅಸಮಾಧಾನ ಹೊರಹಾಕಿದ್ದಾರೆ. ಒಂದು ವಾರದಿಂದ ಹೊರ ಬರಬೇಕು ಎಂದು ಅನಿಸುತ್ತಲೇ ಇತ್ತು. ಇದಕ್ಕೆ ಕಾರಣ ಏನು ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುವೆ ಎಂದು ಹೊರ ಬಂದ ತಕ್ಷಣ ರಿಯಾಕ್ಷನ್ ಕೊಟ್ಟಿದ್ದಾರೆ. ಮೂರು ವರ್ಷಗಳಿಂದ ಬಿಗ್ ಬಾಸ್ ಮನೆಗೆ ನಾನು ಹೋಗಬೇಕು ಎಂದುಕೊಂಡಿದ್ದೆ.
ಈ ಸಲ ಹೋಗಿದ್ದೆ. ಈಗ ಬೇಡ ಅಂತ ವಾಪಸ್ ಬಂದಿದ್ದೇನೆ. ಇನ್ನು ಮುಂದೆ ಬಿಗ್ಬಾಸ್ಗೆ ಹೋಗುವುದಿಲ್ಲ, ಅದು ನನ್ನಂಥವರಿಗೆ ಅಲ್ಲ’ ಎನ್ನುವ ಜೊತೆಗೇನೇ ಇನ್ಮುಂದೆ ಬಿಗ್ಬಾಸ್ ಅನ್ನು ನೋಡುವುದಿಲ್ಲ ಕೂಡ ಎಂದಿದ್ದಾರೆ. ನಾನು ಹೇಗೆ ಆಡಿದ್ದೆ ಎನ್ನುವುದು ಕೂಡ ನೋಡಲು ನನಗೆ ಇಷ್ಟವಿಲ್ಲ. ನಾನು ಬಿಗ್ಬಾಸ್ನಲ್ಲಿ ಸೋತಿದ್ದೇನೆ, ವಿನಾ ಸತ್ತಿಲ್ಲ. ಹೊರಗೆ ಬರುವುದಕ್ಕೆ ನನ್ನದೇ ಕಾರಣಗಳು ಇವೆ.ಮತ್ತೆ ಅಲ್ಲಿಗೆ ಹೋಗೋದು ಸರಿ ಅಲ್ಲ. ಯಾವುದೇ ಕೆಲಸವಾಗಲಿ, ಅದರ ಬಗ್ಗೆ ನಮಗೆ ಒಂದು ಆಸಕ್ತಿ ಬೆಳೆಯಬೇಕು.
ನನಗೆ ಅದೇ ಇಲ್ಲ ಈಗ. ಇಂತಹ ಸಮಯದಲ್ಲಿ ಮತ್ತೆ ನಾನು ಬಿಗ್ ಬಾಸ್ ಮನೆಗೆ ಹೋದರೆ, ನ್ಯಾಯ ಸಲ್ಲಿಸಲು ಸಾಧ್ಯವೇ ಇಲ್ಲ ಎಂದು ಚಂದ್ರಪ್ರಭ ಹೇಳಿದ್ದಾರೆ. ನಾನು ‘ಗಿಚ್ಚಿ ಗಿಲಿಗಿಲಿ’ ವಿಜೇತ ಆಗಿರಬಹುದು. ಆದರೆ ಅದಕ್ಕಿಂತಲೂ ಮಿಗಿಲಾದದ್ದು ಬಿಗ್ಬಾಸ್. ಇದು ವ್ಯಕ್ತಿತ್ವದ ಆಟವಾಗಿದ್ದು, ತನಗೆ ಅದು ಸರಿಹೋಗಲಿಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ.































