ಬೆಂಗಳೂರು: ನನ್ನ ರಾಜಕೀಯದ ಸಂಪೂರ್ಣ ಅವಧಿಯಲ್ಲಿ ಯಾವುದೇ ಕಳಂಕವೂ ಇಲ್ಲ, ಹಗರಣವೂ ಇಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸದನದಲ್ಲಿ ಮಾತನಾಡಿ, 1983ರಲ್ಲಿ ಶಾಸಕನಾಗಿದ್ದೇನೆ. 1984ರಲ್ಲಿ ಮಂತ್ರಿಯಾದೆ! ನಂತರ ವಿಪಕ್ಷ ನಾಯಕನಾಗಿ ಸಿಎಂ ಆಗಿದ್ದೇನೆ.
ಇದು ಎರಡನೇ ಸಲ ಆಗಿರೋದು. ದೇವರಾಜು ಅರಸು ನಂತರ ನಾನೇ ಪೂರ್ಣಾವಧಿ ಸಿಎಂ ಆಗಿ ಕೆಲಸ ಮಾಡಿದ್ದು, ವರ್ಗಾವಣೆ ದಂಧೆ ಆರೋಪದ ಬಗ್ಗೆ ನನಗೆ ಹಾಸ್ಯಾಸ್ಪದ ಎನಿಸುತ್ತಿದೆ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.