ಸರ್ಕಾರದ ನಿಯಮಗಳನ್ನು ಮೀರಿ ರೇಷನ್ ಕಾರ್ಡ್ ಪಡೆದವರ ಪಡಿತರ ಚೀಟಿ ರದ್ದುಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಒಂದು ವೇಳೆ ಈ ರೀತಿ ಬಿಪಿಎಲ್ ಕಾರ್ಡ್ ರದ್ದಾದರೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಸೇರಿದಂತೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಸಿಗುವುದಿಲ್ಲ.
ರೇಷನ್ ಕಾರ್ಡ್ ಸರ್ಕಾರದ ಯೋಜನೆಗಳಿಗೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಒಂದು ವೇಳೆ ಕಾರ್ಡ್ ರದ್ದಾದರೆ ನಿಮಗೆ ಯಾವುದೇ
ಸೌಲಭ್ಯ ಸಿಗುವುದಿಲ್ಲ. ಒಂದು ವೇಳೆ ತಪ್ಪಾಗಿ ನಿಮ್ಮ ಕಾರ್ಡ್ ರದ್ದಾದರೆ ನೀವು ಆಹಾರ ಇಲಾಖೆಗೆ ತೆರಳಿ ಸೂಕ್ತ ದಾಖಲೆ ನೀಡಿ ಮರು ಪಡೆಯಬಹುದು.