ದಾವಣಗೆರೆ :ದಾವಣಗೆರೆ ವಿಭಾಗದಿಂದ ಪ್ರತಿನಿತ್ಯ ಹವಾನಿಯಂತ್ರಿತ ರಹಿತ ಸ್ಲೀಪರ್ ಪಲ್ಲಕಿ ಸಾರಿಗೆ ಸೌಕರ್ಯವನ್ನು ಪ್ರಯಾಣಿಕರ ಹಿತದೃಷ್ಠಿಯಿಂದ ನವಂಬರ್ 3 ರಿಂದ ದಾವಣಗೆರೆಯಿಂದ ಶ್ರೀಶೈಲಕ್ಕೆ ಪ್ರಯಾಣಿಸಬಹುದು.
ದಾವಣಗೆರೆಯಿಂದ -ಹರಿಹರ-ಹರಪನಹಳ್ಳಿ-ಹೊಸಪೇಟೆ-ಬಳ್ಳಾರಿ-ಶ್ರೀಶೈಲಂಗೆ ಸಂಜೆ 5.15ಕ್ಕೆ ಹೊರಟು ಬೆಳಿಗ್ಗೆ 6.30ಕ್ಕೆ ತಲುಪುತ್ತದೆ, ಪ್ರಯಾಣ ದರ ರೂ.1216/- ಇರುತ್ತದೆ.
ಶ್ರೀಶೈಲ-ಬಳ್ಳಾರಿ-ಹೊಸಪೇಟೆ-ಹರಪನಹಳ್ಳಿ-ಹರಿಹರ-ದಾವಣಗೆರೆಗೆ ಸಂಜೆ 5.15 ಕ್ಕೆ ಹೊರಟು ಬೆಳಿಗ್ಗೆ 6.30ಕ್ಕೆ ದಾವಣಗೆರೆ ತಲುಪುತ್ತದೆ. ಪ್ರಯಾಣ ದರ ರೂ.1216/- ಇರುತ್ತದೆ. ಮುಂಗಡ ಬುಕ್ಕಿಂಗ್ ಕೌಂಟರ್‍ಗಳಲ್ಲಿ ಬುಕ್ಕಿಂಗ್ ksrtc.karnataka.gov.in ಮಾಡಲು ಸೌಕರ್ಯ ಕಲ್ಪಿಸಲಾಗಿದೆ. ಪ್ರಯಾಣಿಕರು ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್ ಶಿವಕುಮಾರಯ್ಯ ತಿಳಿಸಿದ್ದಾರೆ.
				
															
                    
                    
                    
                    
                    






























