ಬೆಂಗಳೂರು: 2024- 25 ನೇ ಸಾಲಿನಲ್ಲಿ ಶೇಕಡ 60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ ಪ್ರೌಢಶಾಲೆಗಳಿಗೆ ನೋಟಿಸ್ ಜಾರಿಗೊಳಿಸಿ ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಲಾಗಿದೆ. ಅದೇ ರೀತಿ ಫಲಿತಾಂಶ ಕುಸಿತವಾದ ಅನುದಾನಿತ ಶಾಲೆಗಳಿಗೆ ಸರ್ಕಾರದ ವೇತನಾನುದಾನ ತಡೆಹಿಡಿಯಲು, ವಿಷಯವಾರು ಶಿಕ್ಷಕರ ವಾರ್ಷಿಕ ವೇತನ ಬಡ್ತಿ ಕಡಿತಕ್ಕೆ ಸೂಚಿಸಲಾಗಿದೆ.
ಆದರೆ, ಕಡಿಮೆ ಫಲಿತಾಂಶ ಪಡೆದಿರುವ ಅನುದಾನ ರಹಿತ ಖಾಸಗಿ ಶಾಲೆಗಳ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸತತ ಐದು ವರ್ಷ ಶೇಕಡ 50ರಷ್ಟು ಮಕ್ಕಳು ಫೇಲ್ ಆಗಿದ್ದರೆ ಸಂಪೂರ್ಣ ವೇತನಾನುದಾನ ಕಡಿತ ಮಾಡಲಾಗುವುದು. ಫಲಿತಾಂಶ ಕುಸಿದ ಶಾಲೆಗಳ ಶಿಕ್ಷಕರ ವಾರ್ಷಿಕ ವೇತನ ಬಡ್ತಿಗೆ ಬ್ರೇಕ್ ಹಾಕಲು ಸೂಚನೆ ನೀಡಲಾಗಿದೆ. ಮುಖ್ಯ ಶಿಕ್ಷಕರ ಸಮಜಾಯಿಷಿ ಸಮರ್ಪಕವಿಲ್ಲದಿದ್ದರೆ ಶಿಸ್ತು ಕ್ರಮಕ್ಕೆ ಇಲಾಖೆ ನಿರ್ದೇಶನ ನೀಡಿದೆ.