ದೇಹದಲ್ಲಿ ಅತಿಯಾದ ಬೊಜ್ಜು ಇದ್ದರೆ ಅದು ಮಧುಮೇಹ, ಅಧಿಕ ರಕ್ತದೊತ್ತಡ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬೊಜ್ಜು ಕರಗಿಸಲು ಜನರು ಯೋಗ, ಡಯೆಟ್, ವರ್ಕೌಟ್, ಜಿಮ್ ನಂತಹ ಅನೇಕ ವ್ಯಾಯಾಮಗಳಿಗೆ ಮೊರೆ ಹೋಗುತ್ತಾರೆ. ಮನೆಯಲ್ಲೇ ಸರಳ ವಿಧಾನಗಳನ್ನು ಅನುಸರಿಸಿ ನಾವು ಹೇಗೆ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದಕ್ಕೆ ಈ ಟ್ರಿಕ್ಸ್ ಫಾಲೋ ಮಾಡಿ.
ತೂಕ ಇಳಿಕೆಗೆ ಐಸ್ ಹ್ಯಾಕ್ ವಿಧಾನ ಅತ್ಯಂತ ಉಪಯುಕ್ತವಾಗಿದೆ. ಈ ಬೇಸಿಗೆಗಾಲದಲ್ಲಂತೂ ಇದು ಬೆಸ್ಟ್ ಆಯ್ಕೆ ಅಂತಾನೇ ಹೇಳಬಹುದು. ಐಸ್ ಹ್ಯಾಕ್ ವಿಧಾನ ಅಂದ್ರೆ ನಾವು ತಣ್ಣನೆಯ ಆಹಾರಗಳನ್ನು ಸೇವಿಸುವ ಮೂಲಕ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿಕೊಳ್ಳಬಹುದು. ಮತ್ತು ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ತಣ್ಣನೆ ನೀರು ಕುಡಿಯುವುದರಿಂದ ಕೊಲೆಸ್ಟ್ರಾಲ್ ವೇಗವಾಗಿ ಬರ್ನ್ ಆಗುತ್ತದೆ.
ಬೆಳಿಗ್ಗೆ ಅಥವಾ ಸಂಜೆ ವ್ಯಾಯಾಮದ ನಂತರ ಖಾಲಿ ಹೊಟ್ಟೆಯಲ್ಲಿ ಐಸ್ ವಾಟರ್ ಸೇವಿಸಬೇಕು. ತಣ್ಣನೆಯ ಆಹಾರವನ್ನು ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೂ ಉತ್ತಮ. ಮತ್ತು ತೂಕ ಇಳಿಕೆಗೂ ಸಹಕಾರಿ.