ಬೇಸಿಗೆಯ ಬಿಸಿಲಿನ ಧಗೆಗೆ ನಾವು ಏನಾದರೂ ತಂಪು ಆಹಾರವನ್ನು ಸೇವಿಸಲು ಇಚ್ಛಿಸುತ್ತೇವೆ. ಬಿಸಿಲಿನ ತಾಪಕ್ಕೆ ನಾವು ಯಾವಾಗಲೂ ಹೈಡ್ರೇಟ್ ಆಗಿರೋದು ಅವಶ್ಯಕ. ಬೇಸಿಗೆಯಲ್ಲಿ ನಾವು ಹೆಚ್ಚಾಗಿ ಸೀಸನಲ್ ಹಣ್ಣನ್ನು ಸೇವಿಸುತ್ತೇವೆ. ಅದೇ ರೀತಿ ಮುಳ್ಳುಸೌತೆ ಸೇವಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ.
ಮುಳ್ಳುಸೌತೆಗೆ ಉಪ್ಪು ಮತ್ತು ಪುದೀನಾ ಎಲೆ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹವನ್ನು ತಂಪಾಗಿಡುತ್ತದೆ. ಏಕೆಂದರೆ ಇದರಲ್ಲಿ ತೊಂಭತ್ತೈದು ಶೇಕಡ ನೀರಿನ ಅಂಶವಿದೆ. ಡಿ ಹೈಡ್ರೇಷನ್ ನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದು ದೇಹದ ವಿಷಕಾರಿ ಅಂಶಗಳನ್ನು ತೆಗೆದು ಹಾಕುವುದರ ಜೊತೆಗೆ ಮೂತ್ರಕೋಶದ ಕಾರ್ಯವನ್ನು ಕೂಡಾ ಸುಧಾರಿಸುತ್ತದೆ. ಸೌತೆಕಾಯಿ ರಸದಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ತೂಕ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ.
ಸೌತೆಕಾಯಿಯು ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ತ್ವಚೆಯ ಕೋಮಲತೆಗೆ ಸಹಕಾರಿಯಾಗಿದೆ. ಕಣ್ಣಿನಲ್ಲಿ ಮುಳ್ಳುಸೌತೆ ತುಂಡುಗಳನ್ನು ಇಡುವುದರಿಂದ ಡಾರ್ಕ್ ಸರ್ಕಲ್ ನಂತಹ ತೊಂದರೆಯನ್ನು ತಪ್ಪಿಸಬಹುದು. ಮಹಿಳೆಯರು ಹೆಚ್ಚಾಗಿ ಇದನ್ನು ಬಳಸುತ್ತಾರೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ವಿಸುವ ಮುಳ್ಳುಸೌತೆಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳಿವೆ.