ಹಿತ್ತಲ ಗಿಡ ಮದ್ದಲ್ಲ ಅಂತ ನಮ್ಮ ಹಿರಿಯರು ಹೇಳಿದ್ದಾರೆ. ಕಾರಣ ನಮ್ಮ ಹಿತ್ತಲಲ್ಲಿ ಬೆಳೆಯುವ ಎಷ್ಟೋ ಗಿಡಗಳು ಅತ್ಯಧಿಕ ಔಷದೀಯ ಗುಣಗಳನ್ನು ಹೊಂದಿದೆಯಾದರೂ ಅದನ್ನು ಬಳಸುವಲ್ಲಿ ನಾವು ಹಿಂಜರಿಯುತ್ತೇವೆ. ಅಂತಹ ಔಷದೀಯ ಗಿಡಗಳಲ್ಲಿ ಒಂದೆಲಗ, ಬ್ರಾಹ್ಮಿ ಅಥವ ತುಳುವರು ಬಲು ಇಷ್ಟ ಪಡುವ ತಿಮರೆಯೂ ಒಂದು. ಜೌಗು ಪ್ರದೇಶ ಮತ್ತು ನೈಸರ್ಗಿಕವಾಗಿ ಹರಿಯುವ ನೀರಿನ ಪ್ರದೇಶಗಳಲ್ಲಿ ಬೆಳೆಯುವ ಇದನ್ನು ಆಹಾರವಾಗಿ ಪ್ರತಿನಿತ್ಯ ಸೇವಿಸುವುದರ ಜೊತೆಗೆ ಔಷಧಿಯ ಮೂಲಿಕೆಯಾಗಿಯೂ ಬಳಸಲಾಗುವುದು. ಸಮೂಲ ಸಮೇತ ಬೇಯಿಸದೇ ಆಹಾರದಲ್ಲಿ ಬಳಸುವ ಪದ್ದತಿ ಇಂದಿಗೂ ತುಳುನಾಡಲ್ಲಿ ರೂಡಿಯಲ್ಲಿದೆ. ಬೇಯಿಸಿದರೆ ಅದರಲ್ಲಿರುವ ಸತ್ವ ಕಡಿಮೆಯಾಗುತ್ತದೆ ಎನ್ನುವುದು ಹಿರಿಯರ ಮಾತು.
ಇದರ ಸೇವನೆಯಿಂದ ಸುಸ್ತು ಬಳಲಿಕೆಯು ದೂರವಾಗಿ ದೇಹಕ್ಕೆ ಶಕ್ತಿ ಬರುತ್ತದೆ.
ದಿನ ಒಂದೆರಡು ಎಲೆಯನ್ನು ಬರೀ ಹೊಟ್ಟೆಯಲ್ಲಿ ತಿನ್ನುವುದರಿಂದ ನೆನಪಿನ ಶಕ್ತಿ ಹಾಗೂ ಬುದ್ಧಿ ಹೆಚ್ಚಿಸಿ, ಖಿನ್ನತೆ ಮತ್ತು ಆತಂಕ ಇತ್ಯಾದಿ ದೂರ ಮಾಡಲು ನೆರವಾಗುವುದು.
ತಲೆಯ ಚರ್ಮವನ್ನು ಬ್ರಾಹ್ಮಿ ತೈಲದಿಂದ ಮಸಾಜ್ ಮಾಡಿ ಕೊಂಚ ನಡೆದಾಡಿ ಒಂದು ಲೋಟ ಹಾಲು ಕುಡಿದು ಮಲಗಿದಾಗ ಗಾಢ ನಿದ್ದೆ ಬರುತ್ತದೆ.
ಒಂದೆಲಗ ತ್ವಚೆಗೆ ಟೋನರ್ ಆಗಿ ಕೆಲಸ ಮಾಡುವುದು. ಇದು ಚರ್ಮವನ್ನು ಬಿಗಿಗೊಳಿಸುವುದು. ಇದರಿಂದಾಗಿ ವಯಸ್ಸಾಗುವ ಲಕ್ಷಣ ತಡೆಯುವ, ನೆರಿಗೆ ನಿವಾರಣೆ ಮಾಡುವಂತಹ ಗುಣ ಹೊಂದಿರುವುದರಿಂದ ಕ್ರೀಮ್‌ಗಳಲ್ಲಿ ಒಂದೆಲಗ ಬಳಸುವರು.
ಬ್ರಾಹ್ಮಿ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ಸಮರ್ಥವಾಗಿವೆ.
ವಿಶೇಷವಾಗಿ ಚರ್ಮದ ಹೊರಪದರದಲ್ಲಿ ಅಂಟಿಕೊಂಡಿರುವ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ. ಪರಿಣಾಮವಾಗಿ ಚರ್ಮ ಹೊಸ ಜೀವಕೋಶಗಳನ್ನು ಪಡೆಯುವ ಮೂಲಕ ಸಹಜಕಾಂತಿಯನ್ನು ಹೆಚ್ಚಿಸಿಕೊಳ್ಳುತ್ತದೆ.
ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಒಳ್ಳೆಯ ಪರಣಾಮ ಕಾಣಬಹುದು.
ಒಂದೆಲಗದ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ.
ಇದನ್ನು ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ.
ದಿನಕ್ಕೆ 4-5 ಎಲೆ ಸೇವಿಸುವುದರಿಂದ ಮಾತಿನ ತೊದಲುವಿಕೆ ಇಲ್ಲವಾಗುವುದು.
ಮಲ ಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸಿದರೆ ಉತ್ತಮ.